ಹೊಸ ದಿಗಂತ ವರದಿ, ಶಿವಮೊಗ್ಗ:
ಹಣ ಹಾಗೂ ಅಧಿಕಾರದ ಬಲದಿಂದ ಕಾಂಗ್ರೆಸ್ ಬೆಂಬಲಿತರನ್ನು ತಮ್ಮ ಕಡೆ ಸೆಳೆದು ಅಧಿಕಾರಕ್ಕೇರುವ ಹಗಲು ಕನಸು ಕಾಣುತ್ತಿರುವ ಬಿಜೆಪಿಯ ಯತ್ನ ಫಲಿಸದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಹೊಸನಗರದ ಗಾಯಿತ್ರಿ ಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಸಮಾನತೆ ಎನ್ನುವುದು ಕಾಂಗ್ರೆಸ್ ಪಕ್ಷದ ಧ್ಯೇಯ. ಹಾಗಾಗಿ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ . ಆದರೆ ಈಗಿನ ಕೇಂದ್ರದ ಅಚ್ಛೇದಿನ್ ಎನ್ನುವುದು ಕೇವಲ ಮಾತಿಗಷ್ಟೆ ಸೀಮಿತವಾಗಿದೆ ಧರ್ಮ, ಜಾತಿ ಅಧಾರಿತ ರಾಜಕಾರಣ ದೇಶಕ್ಕೆ ಮಾರಕವಾಗಿದೆ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಹೆಚ್. ಸುಂದರೇಶ್, ವಿಪ ಸದಸ್ಯ ಪ್ರಸನ್ನಕುಮಾರ್, ಜಿಪಂ ಸದಸ್ಯರಾದ ಕಲಗೋಡು ರತ್ನಾಕರ್, ಶ್ವೇತಾ ಬಂಡಿ, ತಾಪಂ ಸದಸ್ಯರಾದ ಚಂದ್ರಮೌಳಿಗೌಡ, ಏರಿಗೆ ಉಮೇಶ್, ಶಕುಂತಲಾ, ಸುಶೀಲಮ್ಮ, ಎಪಿಎಂಸಿ ಅಧ್ಯಕ್ಷ ಅಶೋಕ್ಗೌಡ, ಕೆಸ್ತೂರು ಮಂಜುನಾಥ್, ಕೆಪಿಸಿಸಿ ಸದಸ್ಯ ನಾರಾಯಣರಾವ್, ಬಂಡಿ ರಾಮಚಂದ್ರ, ಎಸ್.ಕೆ. ಭಗವತ್ ಬಿ.ಜಿ.ನಾಗರಾಜ್, ಸದಾಶಿವ ಶ್ರೇಷ್ಠಿ, ಕನ್ನೂರು ಮಂಜಪ್ಪ ಉಪಸ್ಥಿತರಿದ್ದರು.