ಬಳ್ಳಾರಿ: ಹೊಸಪೇಟೆ ತಾಲೂಕು ಪಂಚಾಯಿತಿ ಇ.ಒ.ಸೇರಿದಂತೆ 8 ಜನರಿಗೆ ಕೊರೋನಾ ಸೊಂಕು ಇರುವುದು ದೃಡಪಟ್ಟಿದ್ದು, ಈ ಹಿನ್ನೆಲೆಯಲ್ಲಿ ತಾ.ಪಂ.ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ. ತಾಲೂಕಿನಲ್ಲಿ ಇಲ್ಲಿವರೆಗೆ 3241 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.
ಕೊರೋನಾ ಪ್ರಕರಣಗಳು ನಾನಾ ಕಡೆ ಪತ್ತೆಯಾಗುತ್ತಿದ್ದವು. ಆದರೇ, ಇತ್ತೀಚಿಗೆ ಕೊರೊನಾ ಪ್ರಕರಣಗಳು ಅಧಿಕಾರಿ ವಲಯಕ್ಕೆ ದಾಂಗುಡಿ ಇಟ್ಟಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಕಚೇರಿಯನ್ನು ಒಂದು ವಾರಗಳ ಕಾಲ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.