Tuesday, November 24, 2020

Latest Posts

ರಾಜ್ಯದಲ್ಲಿ ಇಂದು 1509 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಕೆಯಾಗುತ್ತಿದ್ದು, ಇಂದು 1509 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ ಆಗಿದೆ. ಇನ್ನು , ಕೊರೋನಾದಿಂದ 1645...

ಕೊರೋನಾ ಭೀತಿ: ಇಲ್ಲಿ ಡಿ. 15 ರವರೆಗೆ ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಹಿಮಾಚಲ ಪ್ರದೇಶದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆ ಡಿಸೆಂಬರ್ 15 ರವರೆಗೆ ರಾತ್ರಿ ಕರ್ಫ್ಯೂ ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ಸರ್ಕಾರ...

ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಕಡ್ಡಾಯ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರಿಗೆ ಶಿವಸೇನೆ ಸರಕಾರದಿಂದ ಒಂದು ಆದೇಶ ಜಾರಿಯಾಗಿದೆ. ಹೌದು , ಮುಂಬೈ ತೆರಳುವವರಿಗೆ ಕೊರೋನಾ ನೆಗೆಟಿವ್​ ರಿಪೋರ್ಟ್ ಹೊಂದುವುದು...

ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ: ಕೊರೋನಾ ನಿರ್ವಹಣೆಗೆ ನೆರವಾಗಲು ಕೇಂದ್ರದಿಂದ ತಂಡಗಳ ರಚನೆ

ಹೊಸದಿಲ್ಲಿ: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರಗಳಿಗೆ ನೆರವಾಗಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಉನ್ನತ ಮಟ್ಟದ ಕೇಂದ್ರ ತಂಡಗಳನ್ನು ಕರ್ನಾಟಕ, ಕೇರಳ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳಕ್ಕೆ ನಿಯೋಜಿಸಿದೆ. ಈ ರಾಜ್ಯಗಳಲ್ಲಿ ಇತ್ತೀಚಿಗೆ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.
ಪ್ರತಿಯೊಂದು ತಂಡದಲ್ಲಿ ಜಂಟಿ ಕಾರ್ಯದರ್ಶಿ (ಆಯಾ ರಾಜ್ಯಕ್ಕೆ ನೋಡಲ್ ಅಧಿಕಾರಿ), ಸಾರ್ವಜನಿಕ ಆರೋಗ್ಯ ಅಂಶಗಳನ್ನು ನೋಡಿಕೊಳ್ಳಲು ಒಬ್ಬ ಸಾರ್ವಜನಿಕ ಆರೋಗ್ಯ ತಜ್ಞರು, ಸೋಂಕು ತಡೆಗಟ್ಟಲು ರಾಜ್ಯವು ಅನುಸರಿಸುತ್ತಿರುವ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರವನ್ನು ನೋಡಿಕೊಳ್ಳಲು ಒಬ್ಬ ವೈದ್ಯರು ಇರುತ್ತಾರೆ.
ನಿಗ್ರಹ, ಕಣ್ಗಾವಲು, ಪರೀಕ್ಷೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು ಮತ್ತು ಪಾಸಿಟಿವ್ ಪ್ರಕರಣಗಳ ಸಮರ್ಥ ಕ್ಲಿನಿಕಲ್ ನಿರ್ವಹಣೆಯನ್ನು ಬಲಪಡಿಸಲು ರಾಜ್ಯಗಳ ಪ್ರಯತ್ನಗಳನ್ನು ತಂಡಗಳು ಬೆಂಬಲಿಸುತ್ತವೆ. ಸಮಯೋಚಿತ ರೋಗನಿರ್ಣಯ ಮತ್ತು ಅನುಸರಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ತಂಡಗಳು ಮಾರ್ಗದರ್ಶನ ನೀಡುತ್ತವೆ.
ಕರ್ನಾಟಕದಲ್ಲಿ ಒಟ್ಟು 7,43,848 ಪ್ರಕರಣಗಳು ವರದಿಯಾಗಿವೆ. ಇದು ದೇಶದ ಒಟ್ಟು ಪ್ರಕರಣಗಳಲ್ಲಿ ಶೇ.10.1 ಆಗಿದೆ. ಕರ್ನಾಟಕವು ಪ್ರತಿ ಮಿಲಿಯನ್ ಜನಸಂಖ್ಯೆಗೆ 11,010 ಪ್ರಕರಣಗಳನ್ನು ಹೊಂದಿದೆ. ರಾಜ್ಯದಲ್ಲಿ 6,20,008 ರೋಗಿಗಳು ಗುಣಮುಖರಾಗಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರವು ಶೇ.83.35 ಆಗಿದೆ. ಸಕ್ರಿಯ ಪ್ರಕರಣಗಳು 1,13,557 (ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.14.1). ರಾಜ್ಯದಲ್ಲಿ ಒಟ್ಟು 10,283 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳ ಸಾವಿನ ಪ್ರಮಾಣ ಶೇ.1.38 ನಷ್ಟು ಮತ್ತು ಪ್ರತಿ ಮಿಲಿಯನ್ ಜನಸಂಖ್ಯೆಗೆ 152 ಸಾವುಗಳು ಸಂಭವಿಸಿವೆ. ಪ್ರತಿ ಮಿಲಿಯನ್‌ಗೆ ಪರೀಕ್ಷೆಯ ಪ್ರಮಾಣ 95,674 ಮತ್ತು ಪಾಸಿಟಿವ್ ದರ ಶೇ.11.5 ಆಗಿದೆ.
ಕೇರಳದಲ್ಲಿ ಒಟ್ಟು 3,17,929 ಪ್ರಕರಣಗಳು ವರದಿಯಾಗಿದ್ದು, ಇದು ಒಟ್ಟು ಪ್ರಕರಣಗಳಲ್ಲಿ ಶೇ.4.3 ಆಗಿದೆ. ಚೇತರಿಸಿಕೊಂಡ ಒಟ್ಟು ಪ್ರಕರಣಗಳ ಸಂಖ್ಯೆ 2,22,231 ಇದ್ದು, ಚೇತರಿಕೆಯ ದರ ಶೇ.69.90 ಆಗಿದೆ. ಸಕ್ರಿಯ ಪ್ರಕರಣಗಳು 94,609 ಇವೆ. ರಾಜಸ್ಥಾನದಲ್ಲಿ ಒಟ್ಟು 1,67,279 ಪ್ರಕರಣಗಳು, ಪ್ರತಿ ಮಿಲಿಯನ್‌ಗೆ 2,064 ಪ್ರಕರಣಗಳು ಮತ್ತು ಒಟ್ಟು ಚೇತರಿಕೆಯ ಸಂಖ್ಯೆ 1,43,984 ಆಗಿದೆ. ಚೇತರಿಕೆಯ ದರ ಶೇ.86.07 ರಷ್ಟಿದೆ.
ಪಶ್ಚಿಮ ಬಂಗಾಳದಲ್ಲಿ ಒಟ್ಟು 3,09,417 ಪ್ರಕರಣಗಳಿದ್ದು, ಒಂದು ಮಿಲಿಯನ್ ಜನಸಂಖ್ಯೆಗೆ 3,106 ಪ್ರಕರಣಗಳು ವರದಿಯಾಗಿವೆ. ಒಟ್ಟು ಗುಣಮುಖರಾದವರ ಸಂಖ್ಯೆ 2,71,563 ಮತ್ತು ಚೇತರಿಕೆಯ ದರ ಶೇ.87.77 ಇದೆ. ಛತ್ತೀಸ್‌ಗಢದಲ್ಲಿ ಒಟ್ಟು 1,53,515 ಪ್ರಕರಣಗಳು ವರದಿಯಾಗಿವೆ. ಪ್ರತಿ ಮಿಲಿಯನ್‌ಗೆ 5,215 ಪ್ರಕರಣಗಳಿವೆ. ಒಟ್ಟು 1,23,943 ಮಂದಿ ಗುಣಮುಖರಾಗಿ, ಚೇತರಿಕೆಯ ದರ ಶೇ.80.74 ಆಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ರಾಜ್ಯದಲ್ಲಿ ಇಂದು 1509 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಕೆಯಾಗುತ್ತಿದ್ದು, ಇಂದು 1509 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ ಆಗಿದೆ. ಇನ್ನು , ಕೊರೋನಾದಿಂದ 1645...

ಕೊರೋನಾ ಭೀತಿ: ಇಲ್ಲಿ ಡಿ. 15 ರವರೆಗೆ ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಹಿಮಾಚಲ ಪ್ರದೇಶದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆ ಡಿಸೆಂಬರ್ 15 ರವರೆಗೆ ರಾತ್ರಿ ಕರ್ಫ್ಯೂ ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ಸರ್ಕಾರ...

ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಕಡ್ಡಾಯ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರಿಗೆ ಶಿವಸೇನೆ ಸರಕಾರದಿಂದ ಒಂದು ಆದೇಶ ಜಾರಿಯಾಗಿದೆ. ಹೌದು , ಮುಂಬೈ ತೆರಳುವವರಿಗೆ ಕೊರೋನಾ ನೆಗೆಟಿವ್​ ರಿಪೋರ್ಟ್ ಹೊಂದುವುದು...

ನಾಳೆ ರೆಬಲ್‍ಸ್ಟಾರ್ ಅಂಬರೀಶ್ ಕಂಚಿನ ಪ್ರತಿಮೆ ಅನಾವರಣ

ಹೊಸ ದಿಗಂತ ವರದಿ, ಮಂಡ್ಯ: ರೆಬಲ್‍ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳು ಮದ್ದೂರು ತಾಲೂಕು ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಅಂಬರೀಶ್ ಗುಡಿ ನಿರ್ಮಿಸಿ, ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರು ನಾಳೆ ಪ್ರತಿಮೆ ಅನಾವರಣ...

Don't Miss

ರಾಜ್ಯದಲ್ಲಿ ಇಂದು 1509 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಕೆಯಾಗುತ್ತಿದ್ದು, ಇಂದು 1509 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ ಆಗಿದೆ. ಇನ್ನು , ಕೊರೋನಾದಿಂದ 1645...

ಕೊರೋನಾ ಭೀತಿ: ಇಲ್ಲಿ ಡಿ. 15 ರವರೆಗೆ ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಹಿಮಾಚಲ ಪ್ರದೇಶದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆ ಡಿಸೆಂಬರ್ 15 ರವರೆಗೆ ರಾತ್ರಿ ಕರ್ಫ್ಯೂ ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ಸರ್ಕಾರ...

ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಕಡ್ಡಾಯ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರಿಗೆ ಶಿವಸೇನೆ ಸರಕಾರದಿಂದ ಒಂದು ಆದೇಶ ಜಾರಿಯಾಗಿದೆ. ಹೌದು , ಮುಂಬೈ ತೆರಳುವವರಿಗೆ ಕೊರೋನಾ ನೆಗೆಟಿವ್​ ರಿಪೋರ್ಟ್ ಹೊಂದುವುದು...
error: Content is protected !!