Tuesday, June 28, 2022

Latest Posts

ಹೊಸ ವರ್ಷಕ್ಕೆ ಕಿಕ್ ಏರಿಸಲು ಸಜ್ಜಾಗುತ್ತಿದ್ದ ಅಂತರ್ ರಾಜ್ಯ ಡ್ರಗ್ ಪೆಡ್ಲರ್ ಗಳ ಅರೆಸ್ಟ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷದ ಸಂಭ್ರಮ ನಡೆಯಲಿದ್ದು, ಈ ಹಿನ್ನೆಲೆ ಬೆಂಗಳೂರಿಗರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಸಾಗಿಸಲು ಸಜ್ಜಾಗಿದ್ದ ಅಂತರ್ ರಾಜ್ಯ ಡ್ರಗ್ ಪೆಡ್ಲರ್​​​ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಎಂ ತಿರುಪಾಲ್, ಕಮಲೇಶನ್, ಸತೀಶ್ ಕುಮಾರ್, ಏಜಾಜ್ ಪಾಶಾ ಬಂಧಿತ ಆರೋಪಿಗಳು. ನಗರದ ಅಮೃತಹಳ್ಳಿಯ ಮನೆಯೊಂದರಲ್ಲಿ ಮಾದಕ ದಂಧೆ ನಡೆಸುತ್ತಿದ್ದರು. ಬಂಧಿತರಿಂದ ಬರೋಬ್ಬರಿ 1 ಕೋಟಿ 15 ಲಕ್ಷ ಮೌಲ್ಯದ ಮಾದಕ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. 5 ಕೆ.ಜಿ 600 ಗ್ರಾಂ ಹ್ಯಾಶ್ ಆಯಿಲ್, 3 ಕೆ.ಜಿ 300 ಗ್ರಾಂ ಗಾಂಜಾ, ಕಾರ್, ಬೈಕ್ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹೊಸ ವರ್ಷದ ಭಾಗವಾಗಿ ನಡೆಯುವ ಪಾರ್ಟಿಗಳಿಗೆ ಸಪ್ಲೇ ಮಾಡಲು ಆರೋಪಿಗಳು ಹ್ಯಾಶಿಶ್ ಆಯಿಲ್ ತರಿಸಿದ್ದರು. ಸುಮಾರು 1 ಕೋಟಿ ರೂ. ಮೌಲ್ಯದ ಮಾದಕ ಸಹಿತ ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಈ ವೇಳೆ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಸಿಸಿಬಿ ಪೊಲೀಸರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ 50 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss