Tuesday, July 5, 2022

Latest Posts

ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ನೀಡಿದ ರೈಲ್ವೆ ಇಲಾಖೆ

ಹೊಸದಿಲ್ಲಿ: ಹೊಸ ವರ್ಷಾ ಸಂಭ್ರಮಾಚರಣೆ ಸಂದರ್ಭದಲ್ಲಿ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಶಾಕ್ ನೀಡಿದೆ.

ಈಗಾಗಲೇ ಹೆಚ್ಚಾಗಿರುವ ಪರಿಷ್ಕೃತ ರೈಲ್ವೆ ದರ ಇಂದಿನಿಂದ ಜಾರಿಗೊಳ್ಳಲಿದೆ. 2014ರಲ್ಲಿ ರೈಲು ಪ್ರಯಾಣ ದರ ಹೆಚ್ಚು ಮಾಡಲಾಗಿತ್ತು. ಈಗ 5 ವರ್ಷಗಳ ಬಳಿಕ ದರ ಹೆಚ್ಚಳ ಮಾಡಲಾಗಿದೆ.

ಸಾಮಾನ್ಯ ಅರೆ ಹವಾನಿಂತ್ರಿತ ರೈಲು ಪ್ರಯಾಣದ ದರ ಪ್ರತಿ ಕಿ.ಮೀ.ಗೆ ಒಂದು ಪೈಸೆ, ಮೇಲ್/ ಎಕ್ಸ್ ಪ್ರೆಸ್ ನಾನ್ ಎಸಿ ರೈಲು ಪ್ರಯಾಣ ದರ ಪ್ರತಿ ಕಿ.ಮೀ.ಗೆ 2 ಪೈಸೆ ಹಾಗೂ ಎಸಿ ರೈಲುಗಳ ಪ್ರಯಾಣ ದರ ಕಿ.ಮೀ.ಗೆ 4 ಪೈಸೆಗೆ ಏರಿಸಲಾಗಿದೆ.

ಉಪನಗರ ರೈಲು ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂತೆಯೇ ಈಗಾಗಲೇ ಕಾಯ್ದಿರಿಸಲಾದ ಟಿಕೆಟ್ ಗಳಿಗೆ ಈ ಹೆಚ್ಚಳ ಅನ್ವಯವಾಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss