ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸುದೀರ್ಘ ಕಾಲದಿಂದ ನಿರೀಕ್ಷೆ ಮೂಡಿಸಿರುವ ರಾಜಕೀಯ ಪಕ್ಷವನ್ನು ಮುಂದಿನ ವರ್ಷ ಜನವರಿಯಲ್ಲಿ ಆರಂಭಿಸಲಿದ್ದು, ಡಿಸೆಂಬರ್ 31ರಂದು ನಿರ್ಧಾರ ಪ್ರಕಟಿಸುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಘೋಷಿಸಿದ್ದಾರೆ.
ರಜನಿಕಾಂತ್ ಇಂದು ಟ್ವೀಟ್ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದು, ಅಧ್ಯಾತ್ಮಿಕ ರಾಜಕೀಯದೊಂದಿಗೆ ಭ್ರಷ್ಟಾಚಾರ ರಹಿತ, ಪ್ರಾಮಾಣಿಕ, ಪಾರದರ್ಶಕ ಮತ್ತು ಜಾತ್ಯತೀತ ಪಕ್ಷವನ್ನು ಸ್ಥಾಪಿಸುತ್ತಿದ್ದು, ಇದು ಮುಂದಿನ ಚುನಾವಣೆಯಲ್ಲಿ ಖಂಡಿತವಾಗಿಯೂ ಜಯಗಳಿಸಲಿದೆ ಎಂದಿದ್ದಾರೆ.
ಈಗ ಬದಲಾವಣೆ, ರೂಪಾಂತರ ತರದಿದ್ದರೆ ಮತ್ತೆ ಯಾವಾಗಲೂ ಸಾಧ್ಯವಿಲ್ಲ. ಜನವರಿಯಲ್ಲಿ ಪಕ್ಷ ಆರಂಭವಾಗುತ್ತದೆ, ಈ ಸಂಬಂಧ ಡಿಸೆಂಬರ್ 31ರಂದು ಘೋಷಣೆ ಮಾಡಲಾಗುವುದು. ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಜನರ ಬೆಂಬಲದೊಂದಿಗೆ ಧಾರ್ಮಿಕ ರಾಜಕೀಯ ತಮಿಳು ನಾಡಿನಲ್ಲಿ ಆರಂಭವಾಗಲಿದೆ ಎಂದಿದ್ದಾರೆ.
ತಮಿಳುನಾಡಿನಲ್ಲಿ 2021ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಕಳೆದ ತಿಂಗಳಷ್ಟೇ ರಜಿನಿಕಾಂತ್ ತಾವು 2016ರಲ್ಲಿ ಕಿಡ್ನಿ ಕಸಿ ಮಾಡಿಸಿದ ವಿಚಾರ ಬಹಿರಂಗಪಡಿಸಿದ್ದರು. ವೈದ್ಯರ ಸಲಹೆ ಮೇರೆಗೆ ರಾಜಕೀಯ ಚಟುವಟಿಕೆ ವಿಳಂಬ ಮಾಡಿದ್ದಾಗಿ ಇತ್ತೀಚೆಗೆ ಹೇಳಿದ್ದರು.
Actor Rajinikanth says: Announcement about launching of political party on December 31 @xpresstn @NewIndianXpress pic.twitter.com/N79dVeNaIV
— T Muruganandham (@muruga_TNIE) December 3, 2020