ಹೊಸ ವರ್ಷಕ್ಕೆ ಹೊಸ ಸಂದೇಶ ನೀಡಿದ ರಾಕಿಂಗ್ ಸ್ಟಾರ್

0
271

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ರಾಕಿಂಗ್ ಸ್ಟಾರ್ ಯಶ್ ಬೆಂಗಳೂರು ನಗರ ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ.

ತಮ್ಮ ಕುಟುಂಬದವರು, ಪ್ರೀತಿ ಪಾತ್ರರು ನಿಮಗಾಗಿ ಕಾಯುತ್ತಿರುತ್ತಾರೆ. ಕುಡಿದು ವಾಹನ ಓಡಿಸಬೇಡಿ. ರಸ್ತೆ ಸುರಕ್ಷತೆಗೆ ಪೊಲೀಸರೊಂದಿಗೆ ಕೈ ಜೋಡಿಸಿ ಎಂದು ಯಶ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ವಿಡಿಯೋದಲ್ಲಿರುವ ಸಂದೇಶವೇನು?: ಹೊಸ ವರ್ಷ ಪ್ರತಿ ವರ್ಷ ಬರುತ್ತದೆ. ಅದರ ಜೊತೆಗೆ ಹೊಸ ಆಸೆ, ಕನಸು, ಗುರಿ ಹೀಗೆ ಪ್ರತಿಯೊಬ್ಬರು ತಮ್ಮ ಜೀವನವನ್ನು ರೀ-ಸೆಟ್ ಮಾಡಿ ರೀ-ಸ್ಟಾರ್ಟ್ ಮಾಡುವ ಜೋಶ್‍ನಲ್ಲಿ ಇರುತ್ತಾರೆ. ಇದು ಹೊಸತನ ಬರ ಮಾಡಿಕೊಳ್ಳುವ ಸಮಯ ನಿಜ. ಹಾಗಂತ ಎಚ್ಚರ ತಪ್ಪಿ ಕುಡಿದು ವಾಹನ ಓಡಿಸಿದರೆ, ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಒಂದು ದಿನ ಪಾರ್ಟಿ ಮಾಡಿ ಸ್ನೇಹಿತರ ಜೊತೆ ಖುಷಿಯಾಗಿರುವ ಜೋಶ್‍ನಲ್ಲಿ ಮೈ ಮರೆತು ನೀವು ವಾಹನ ಓಡಿಸಿದರೆ, ಅನಾಹುತವಾಗುತ್ತದೆ.

ನಿಮಗೇನಾದರೂ ಹೆಚ್ಚು ಕಡಿಮೆ ಆದರೆ ನಿಮ್ಮನ್ನು ನಂಬಿಕೊಂಡು ಇರುವವರು ಅಥವಾ ನಿಮ್ಮನ್ನು ಪ್ರೀತಿಸುವವರು ಜೀವನಪರ್ಯಂತ ನೋವು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರ ಏನೆಂದರೆ, ಸಾರ್ವಜನಿಕರ ವಾಹನ ಬಳಸಿ, ಕುಡಿದಾಗ ಕ್ಯಾಬ್ ಬುಕ್ ಮಾಡಿ, ಇಲ್ಲವೆಂದರೆ ಕುಡಿದೆ ಇರುವವರಿಗೆ ವಾಹನ ಚಲಾಯಿಸಲು ಕೊಡಿ. ಸ್ಮಾರ್ಟ್ ಆಗಿರಿ. ರಸ್ತೆ ಸುರಕ್ಷಿತೆಗಾಗಿ ಬೆಂಗಳೂರು ಪೊಲೀಸರೊಂದಿಗೆ ಕೈ ಜೋಡಿಸೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸೇಫ್ ಆಗಿರಿ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here