Sunday, June 26, 2022

Latest Posts

ಹೊಸ ವರ್ಷದ ಸಂಭ್ರಮದಲ್ಲಿ ಕೋಲಾರದ ವಿವಿಧ ದೇವಾಲಯಗಳಲ್ಲಿ ನಡೆಯಿತು ವಿಶೇಷ ಪೂಜೆ

ಹೊಸ ದಿಗಂತ ವರದಿ, ಕೋಲಾರ:

ಹೊಸ ವರ್ಷವನ್ನು ಜಿಲ್ಲಾದ್ಯಂತ ಜನತೆ ಸಂಭ್ರಮದಿಂದ ಸ್ವಾಗತಿಸಿದ್ದು, ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಹೊಸ ವರ್ಷದ ಹಿನ್ನಲೆಯಲ್ಲಿ ಸರ್ಕಾರಿ ನೌಕರರು ಕಚೇರಿಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿ, ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
ನಗರದ ನಗರದೇವತೆ ಕೋಲಾರಮ್ಮ ದೇವಾಲಯದಲ್ಲಿ  ಹೊಸ ವರ್ಷ ಮತ್ತು ಶುಕ್ರವಾರದ  ಎರಡೂ ಒಂದೇ ದಿನ ಬಂದಿರುವುದರಿಂದ ದೇವಾಲಯದಲ್ಲಿ ಉದ್ದುದ್ದ ಸಾಲು  ಕಂಡು ಬಂತು.
ನಗರದ ಕೆಇಬಿ ಕಾಲೋನಿಯ ವಿದ್ಯಾಗಣಪತಿ ದೇವಾಲಯದಲ್ಲಿ ಹೊಸ ವರ್ಷದ ಅಂಗವಾಗಿ ಗಣಪನಿಗೆ ವಿಶೇಷ ಪೂಜೆ ಮತ್ತು ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು.
ಒಟ್ಟಾರೆ ನಾಗರೀಕರು ಹೊಸ ವರ್ಷದಲ್ಲಿ ಒಳಿತನ್ನು ಮಾಡು ಎಂದು ದೇವರಿಗೆ ಮೊರೆ ಹೋಗಿದ್ದು ಕಂಡು ಬಂತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss