Saturday, July 2, 2022

Latest Posts

ಹೊಸ ವರ್ಷವನ್ನು ಹೊಸ ಭರವಸೆಯ ಮನೋಭಾವದಿಂದ ಸ್ವಾಗತಿಸೋಣ: ಶುಭಾಶಯ ಕೋರಿದ ಉಪರಾಷ್ಟ್ರಪತಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ದೇಶದ ಜನರಿಗೆ ಹೊಸ ವರ್ಷದ ಮುನ್ನಾ ದಿನ ಶುಭಾಶಯ ತಿಳಿಸಿದ್ದಾರೆ.
2021 ಕ್ಕೆ ಕಾಲಿಡುತ್ತಿರುವ ದೇಶದ ಎಲ್ಲ ನಾಗರಿಕರಿಗೆ ಆತ್ಮೀಯ ಶುಭಾಶಯ. ಇದು ನಾವೆಲ್ಲರೂ ಹೊಸ ವರ್ಷವನ್ನು ಎದುರು ನೋಡುತ್ತಿರುವ ಸಂದರ್ಭ. . ಇದು ನಮ್ಮ ಆಶಾವಾದ, ಭರವಸೆ ಮನೋಭಾವವನ್ನು ಬಲಪಡಿಸುವ ಒಂದು ಸಂದರ್ಭವಾಗಿದೆ.
ವಿಚಿತ್ರ ಸಾಂಕ್ರಾಮಿಕ ರೋಗದ ಮೂಲಕ ನಮಗೆ ಅನೇಕ ಜೀವನ ಪಾಠಗಳನ್ನು ಕಲಿಸಿದ ವರ್ಷಕ್ಕೆ ವಿದಾಯ ಹೇಳುವಾಗ, ಹೊಸ ವರ್ಷವನ್ನು ಹೊಸ ಭರವಸೆಯ ಮನೋಭಾವದಿಂದ ಸ್ವಾಗತಿಸೋಣ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.
2021 ಕಳೆದ ವರ್ಷಕ್ಕಿಂತ ಹೆಚ್ಚು ಆರೋಗ್ಯಕರ, ಸಂತೋಷ ಮತ್ತು ಸಾಮರಸ್ಯದ ಕೂಡಿ ಬರಲಿ ಆಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss