Wednesday, July 6, 2022

Latest Posts

ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಪೊಲೀಸರಿಂದ ಭದ್ರತೆ

ಬೆಂಗಳೂರು: ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿ ಹಲವು ಭದ್ರತೆಗಳನ್ನು ಕೈಗೊಂಡಿದ್ದಾರೆ. ಸಂಭ್ರಮಾಚರಣೆ ವೇಳೆ ಮಹಿಳೆಯರ ಸುರಕ್ಷತೆಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಡಿ.31ರಂದೇ ಬೆಂಗಳೂರಿನಾದ್ಯಂತ ಪೊಲೀಸರ ನಿಯೋಜನೆ ಮಾಡಲಾಗುವುದು. ಜ.1 ಬೆಳಗ್ಗೆ 8 ರವರೆಗೂ ಪೊಲೀಸ್ ಭದ್ರತೆ ಒದಗಿಸಲಾಗುವುದು. ಪೊಲೀಸರು ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮಧ್ಯಾಹ್ನದಿಂದ ರಾತ್ರಿ 2 ಗಂಟೆಯವರೆಗೂ ಒಂದು ಪಾಳಿ ಹಾಗೂ ರಾತ್ರಿ 2 ರಿಂದ ಎರಡನೇ ಪಾಳಿಯಲ್ಲಿ ಪೋಲಿಸರು ಕಾರ್ಯ ನಿರ್ವಹಿಸಲಿದ್ದಾರೆ. ಉಪ ಪೊಲೀಸ್ ಆಯುಕ್ತರು ಎರಡು ಭಾಗಗಳಾಗಿ ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ ಹಾಗೂ ಕೋರಮಂಗಲದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಸಿಸಿಟಿವಿ ಕ್ಯಾಮೇರ ಅಳವಡಿಸಲಾಗಿದೆ. 270 ಹೊಯ್ಸಳ ಸೇವೆ ಬಳಸಿಕೊಳ್ಳಲಾಗುತ್ತಿದೆ. ಯಾವುದೇ ಸಮಸ್ಯೆ ಕಂಡು ಬಂದರೂ ಕೂಡಲೇ ಅಲ್ಲಿಗೆ ತೆರಳಲಾಗುವುದು. ಕುಡಿದು ಗಲಾಟೆ ಮಾಡುವುದು, ಅಸಭ್ಯವಾಗಿ ವರ್ತಿಸುವುದು, ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬ್ರಿಗೇಡ್ ರಸ್ತೆ ಹಾಗೂ ಎಂ.ಜಿ.ರಸ್ತೆಯಲ್ಲಿ ವಾಚ್ ಟವರ್ ನಿರ್ಮಿಸಲಾಗಿದೆ. ಕುಡಿದು ವಾಹನ ಚಲಾಯಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಓಲಾ, ಉಬರ್ ಚಾಲಕರಿಗೂ ಎಚ್ಚರಿಕೆ ನೀಡಿರುವ ಪೊಲೀಸ್ ಆಯುಕ್ತರು, ಒಂಟಿಯಾಗಿ ಕ್ಯಾಬ್ ಗಳಲ್ಲಿ ಸಂಚಾರಿಸುವ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡರೆ ಕಂಪೆನಿಗಳು ಮತ್ತು ಚಾಲಕರ ವಿರುದ್ಧ ಸಹ ಕ್ರಮ ಜರುಗಿಸಲಾಗುವುದು. ಪಾರ್ಟಿ ಮತ್ತು ಹೊಟೇಲ್ ಗಳಿಗೆ ತೆರಳುವ ಮಹಿಳೆಯರು ಅಪರಿಚಿತರು ಏನೇ ನೀಡಿದರೂ ತೆಗೆದುಕೊಳ್ಳಬಾರದು. ಹೊಟೇಲ್ ಗಳಲ್ಲಿ ಜ್ಯೂಸ್ ಮತ್ತು ಡ್ರಿಂಕ್ಸ್ ಗಳಲ್ಲಿ ಮತ್ತು ಬರುವ ಅಂಶ ಬೇರೆಸಲಾಗುತ್ತದೆ. ಹೀಗಾಗಿ ಅಪರಿಚಿತರು ನೀಡುವ ಪಾನೀಯಗಳನ್ನು ಸೇವಿಸಬಾರದು ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss