ಮಂಗಳೂರು: ಇದೀಗ ದೇಶದಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವವರು ಮನೆಯಿಂದ ಹೊರಗೆ ಬಂದು ಜನರಲ್ಲಿ ಆತಂಕ ಉಂಟು ಮಾಡುವುದಲ್ಲದೆ, ಕೊರೋನಾ ಸೋಂಕನ್ನು ಹರಡುತ್ತಿದ್ದಾರೆ.
ಹೋಂ ಕ್ವಾರಂಟೈನಲ್ಲಿರುವವರ ಮೇಲ ನಿಗಾ ವಹಿಸುವಲ್ಲಿ ಪೊಲೀಸರು, ವೈಧ್ಯರು, ಜಿಲ್ಲಾಡಳಿತ ಪರದಾಡುತ್ತಿದೆ.
ಇದೀಗ ಹೋಂ ಕ್ವಾರಂಟೈನ್ ನಲ್ಲಿರುವವರ ಲೈವ್ ಅಪ್ಡೇಟ್ ನೀಡುವ ಮೊದಲ ಪ್ರಯತ್ನ ಐಸರ್ಚ್ ಎಂಬ ಸಂಸ್ಥೆ ನೂತನ ಆ್ಯಪ್ COVID19 BLT DATABASE ಸಿದ್ದಪಡಿಸಿದೆ. ಕೊರೋನಾ ಶಂಕೆ ಇರುವವರ ಮಾಹಿತಿಯನ್ನು ಜಿ.ಪಿ.ಎಸ್ ಆಧಾರಿತ ಆ್ಯಪ್ ನಿಂದ ಪಡೆಯಲು ದಕ್ಷಿಣ ಕನ್ನಡದ ಬೆಲ್ತಂಗಡಿ ಸಿದ್ದವಾಗಿದೆ.
ತಾಲೂಕು ಆಡಳಿತ, ತಹಶಿಲ್ದಾರರು, ಪೊಲೀಸ್ ಇಲಾಖೆ, ಆರೋಗ್ಯ ಹಾಗೂ ಬೆಲ್ತಂಗಡಿ ಶಾಸಕರು ಕಚೇರಿ ಹಾಗೂ ಐಸರ್ಚ್ ಸಂಸ್ಥೆ ಈ ಆ್ಯಪ್ ಬಳಸಿ ಶಂಕಿತ ಮೇಲೆ ನಿಗಾ ಇಡುವಲ್ಲಿ ನಿರತರಾಗಿದ್ದಾರೆ. ಈ ಆ್ಯಪ್ ನಲ್ಲಿ ಕೊರೋನಾ ಶಂಕಿತರ ಭಾವಚಿತ್ರ ಸಹಿತ ಅವರನ್ನು ಟ್ರಾಕ್ ಮಾಡುವ ವ್ಯವಸ್ಥೆ ಇದರಲ್ಲಿದೆ.