ಹೊಸದಿಗಂತ ವರದಿ,ಬಳ್ಳಾರಿ:
ಚಾಲಕನ ನಿಯಂತ್ರಣ ತಪ್ಪಿ ಕಾರೋಂದು ಹೋಟೆಲ್ ಗೆ ನುಗ್ಗಿದ್ದು, ಮೂವರು ಗಾಯಗೊಂಡ ಘಟನೆ ಕೂಡ್ಲಗಿ ತಾಲೂಕಿನ ಸೋವೆನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೆಣ್ಣೆಹಳ್ಳಿಯಿಂದ ಸೋವೇನಹಳ್ಳಿ ಗ್ರಾಮಕ್ಕೆ ನಿಶ್ಚಿತಾರ್ಥಕ್ಕೆಂದು ಕಾರಿನಲ್ಲಿ ಚಾಲಕ ಸೇರಿ ನಾಲ್ಕು ಜನರು ತೆರಳುತ್ತಿರುವಾಗ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೋಟೆಲ್ಗೆ ನುಗ್ಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಸೋವೇನಹಳ್ಳಿ ಗ್ರಾಮದ ಹೋಟೆಲ್ ಮಾಲೀಕ ಮಹೇಶ (65) ಹಾಗೂ ಆತನ ಪತ್ನಿ ಸುಶೀಲಮ್ಮ (50), ಮತ್ತು ಕಾರಿನಲ್ಲಿದ್ದ ಬಿಂದುಶ್ರೀ (18) ಗಾಯಗೊಂಡವರು. ತಕ್ಷಣ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಚಾಲಕ ಪರಾರಿಯಾಗಿದ್ದು, ಈ ಕುರಿತು ಸಮೀಪದ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.