Thursday, June 30, 2022

Latest Posts

‘ಹೋಮ್ ಆಫ್ ಧೋನಿ ಫ್ಯಾನ್​’​: ತನ್ನ ಮನೆಗೆ ಸಂಪೂರ್ಣ ಹಳದಿ ಬಣ್ಣದಿಂದ ಸಿಂಗರಿಸಿ ಅಭಿಮಾನ ಮೆರೆದ ಸೂಪರ್ ಫ್ಯಾನ್!

ಚೆನ್ನೈ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ, ಹಾಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಎಂ.ಎಸ್​. ಧೋನಿಗೆ ವಿಶ್ವದಾದ್ಯಂತ ಹಲವಾರು ಕಟ್ಟರ್​ ಅಭಿಮಾನಿಗಳಿದ್ದಾರೆ. ಧೋನಿಯನ್ನೇ ಆರಾಧ್ಯ ದೈವವೆಂದು ಪೂಜಿಸುವವರು ಕೂಡ ಇದ್ದಾರೆ.
ಧೋನಿಗೆ ಅಂಥ ಹಲವು ಅಭಿಮಾನಿಗಳ ಪೈಕಿ ಒಬ್ಬರಾಗಿರುವ ಚೆನ್ನೈ ನಿವಾಸಿ ಗೋಪಾಲಕೃಷ್ಣನ್, ವಿಶೇಷ ರೀತಿಯಲ್ಲಿ ಅಭಿಮಾನ ಮೆರೆದಿದ್ದಾರೆ.
ಹೌದು , ಇಲ್ಲಿ ಅಭಿಮಾನಿಯೊಬ್ಬ ತನ್ನ ಮನೆಗೆ ಸಂಪೂರ್ಣ ಹಳದಿ ಬಣ್ಣವನ್ನೇ ಬಳಿಸುವ ಮೂಲಕ ತಾನೂ ಗೆದ್ದರೂ, ಸೋತರೂ ಧೋನಿಗೆ ತನ್ನ ಬೆಂಬಲ ಸದಾ ಇರುತ್ತದೆ ಎನ್ನುವುದನ್ನ ಸಾಬೀತುಪಡಿಸಿದ್ದಾನೆ.
ಧೋನಿ ನೇತೃತ್ವದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಈ ಬಾರಿ ಐಪಿಎಲ್‌ನಲ್ಲಿ ನಿರೀಕ್ಷಿತ ನಿರ್ವಹಣೆ ತೋರುತ್ತಿಲ್ಲ. ಆದರೂ ಗೋಪಾಲಕೃಷ್ಣನ್ ಅಭಿಮಾನ ಕಡಿಮೆಯಾಗಿಲ್ಲ. ಸಿಎಸ್‌ಕೆ ತಂಡದ ಹಳದಿ ಬಣ್ಣವನ್ನು ತಮ್ಮ ಮನೆಗೆ ಬಳಿದುಕೊಂಡಿರುವ ಗೋಪಾಲಕೃಷ್ಣನ್, ‘ಹೋಮ್ ಆಫ್ ಧೋನಿ ಫ್ಯಾನ್​’​ ಎಂದು ಎಂದೂ ಬೋರ್ಡ್ ಹಾಕಿಕೊಂಡಿದ್ದಾರೆ.
ಸುಮಾರು 1.5 ಲಕ್ಷ ರೂ. ಖರ್ಚು ಮಾಡಿರುವ ಗೋಪಿಕೃಷ್ಣನ್ ಎಂಬಾತ ತನ್ನ ಮನೆಯ ಗೋಡೆಗಳ ಮೇಲೆ ಧೋನಿಯ ಭಾವಚಿತ್ರಗಳನ್ನು ಬಿಡಿಸಿದ್ದಾರೆ. ಜೊತೆಗೆ ಸಿಎಸ್​ಕೆ ಲೋಗೋ ಮತ್ತು ವಿಸಲ್ ಪೋಡು ಎಂಬ ಟ್ಯಾಗ್ ಲೈನ್​ ಕೂಡ ಬರೆಸಿಕೊಂಡಿದ್ದಾರೆ.​​
ಗೋಪಿಕೃಷ್ಣನ್​ ತಮಿಳುನಾಡಿನ ಕಡಲೂರು ನಿವಾಸಿಯಾಗಿದ್ದಾರೆ. ಇವರು ಕೆಲವು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಪ್ರತಿ ಸಿಎಸ್​ಕೆ ಪಂದ್ಯಗಳಿಗೂ ಹಾಜರಾಗುತ್ತಿದ್ದ ಅವರಿಗೆ ಕೋವಿಡ್​ 19 ಕಾರಣದಿಂದ ತಮ್ಮ ಸ್ವಂತ ಊರಿನಲ್ಲಿದ್ದಾರೆ.
ಈ ಬಾರಿ ಐಪಿಎಲ್‌ನಲ್ಲಿ ಧೋನಿ ಆಟವನ್ನು ಕಣ್ಣಾರೆ ನೋಡಲು ಸಾಧ್ಯವಾಗದಿರುವುದಕ್ಕೆ ಬೇಸರಗೊಂಡಿದ್ದಾರೆ. ಧೋನಿ ಆಟವನ್ನು ಈಗ ಹಲವು ಮಂದಿ ಟೀಕಿಸುತ್ತಿದ್ದಾರೆ. ಹೀಗಾಗಿ ಮೈದಾನಕ್ಕೆ ಹೋಗಿ ಅವರನ್ನು ಹುರಿದುಂಬಿಸುವ ಅವಕಾಶ ಸಿಕ್ಕರೆ ಒಳ್ಳೆಯದಿತ್ತು. ಅವರ ತಂಡ ಸೋಲಲಿ-ಗೆಲ್ಲಲಿ, ನನ್ನ ಬೆಂಬಲ ಯಾವಾಗಲೂ ಅವರಿಗೆ ಇರುತ್ತದೆ ಎಂದು ಗೋಪಾಲಕೃಷ್ಣನ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss