ಹೊಸದಿಗಂತ ಆನ್ ಲೈನ್ ಡೆಸ್ಕ್:
ನಿನ್ನೆಯಷ್ಟೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಕಿಡ್ನಾಪ್ ಮಾಡಿದ್ದ ಮಾಹಿತಿ ಬೆಳಕಿಗೆ ಬಂದ ಬೆನ್ನಲ್ಲೇ ಘಟನೆಯ ಕುರಿತು ಮಾಹಿತಿ ನೀಡಲು ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಖುದ್ದು ವರ್ತೂರು ಪ್ರಕಾಶ್ ಅವರೇ ಭೇಟಿ ಮಾಡಿದ್ದಾರೆ.
ಈ ಸಂದರ್ಭ ನಡೆದ ಘಟನೆಯನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಪ್ರಕಾಶ್ ವಿವರವಾಗಿ ತಿಳಿಸಿದ್ದು, ತಮ್ಮ ಕುಟುಂಬಕ್ಕೆ ಕೊಲೆ ಬೆದರಿಕೆ ಇರುವುದಾಗಿ ತಿಳಿಸಿ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ನ. 25 ರಂದು ಕೋಲಾರದಲ್ಲಿರುವ ತಮ್ಮ ಫಾರ್ಮ್ ಹೌಸ್ ನಿಂದ ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದ ಪ್ರಕಾಶ್ ಅವರ ಕಾರನ್ನು ದುಷ್ಕರ್ಮಿಗಳು ಅಡ್ಡ ಹಾಕಿ ಕಿಡ್ನಾಪ್ ಮಾಡಿದ್ದರು.
ವರ್ತೂರು ಅವರ ಕಾರಿನ ಚಾಲಕನಿಗೆ ಮಚ್ಚಿನಲ್ಲಿ ಹಲ್ಲೆ ಮಾಡಿ, 4 ಗಂಟೆಗಳ ಕಾಲ ಕೂಡಿ ಹಾಕಿದ್ದು, 3 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ. ಬಳಿಕ ಹಣಕ್ಕೆ ಪೀಡಿಸಿದ ದುಷ್ಕರ್ಮಿಗಳು ವರ್ತೂರ್ ಅವರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಹಣವಿಲ್ಲದ ಕಾರಣ ಇವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುಮಾರು 3 ಗಂಟೆ ಹಲ್ಲೆ ಮಾಡಿದ್ದಾರೆ.
ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಗೆ ಇಟ್ಟರು. ಅವರ ಬೆದರಿಕೆಗೆ ಮಣಿದ ಸಚಿವರು ತಮ್ಮ ಸ್ನೇಹಿತನಿಗೆ ಕರೆ ಮಾಡಿ 48 ಲಕ್ಷ ರೂ ಪಡೆದು ಕಿಡ್ನಾಪರ್ಸ್ ಗೆ ನೀಡಿದ್ದಾರೆ ಎಂದು ಪ್ರಕಾಶ್ ತಿಳಿಸಿದ್ದಾರೆ.