Wednesday, August 17, 2022

Latest Posts

ಹೋರಾಟಗಾರರಿಗೆ ಎಂದಿಗೂ ಹಿನ್ನಡೆಯಾಗುವುದಿಲ್ಲ, ಇಂದಿನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುವೆ: ಸಿಎಂ ಬಿಎಸ್’ವೈ

ಬೆಂಗಳೂರು: ಇಂದು  ಬಾಬ್ರಿ ಕಟ್ಟಡ ದ್ವಂಸ  ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿರುವ ತೀರ್ಪು ಐತಿಹಾಸಿಕ ತೀರ್ಪಾಗಿದ್ದು, ಇದನ್ನು ಸ್ವಾಗತಿಸುವುದಾಗಿ, ಇಡೀ ಭಾರತವೇ ಒಪ್ಪುವಂತಹ ತೀರ್ಪು ಇದಾಗಿದೆ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಅಂದು ಅಡ್ವಾಣಿಯವರು ನಡೆಸಿದ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಹೋರಾಟಗಾರರಿಗೆ ಎಂದಿಗೂ ಹಿನ್ನಡೆಯಾಗುವುದಿಲ್ಲ. ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಎಲ್ಲ 32 ಆರೋಪಿಗಳನ್ನು ನಿರ್ದೋಷಿ ಎಂದು ತೀರ್ಪು ನೀಡಲಾಗಿದ್ದು, ಸತ್ಯಕ್ಕೆ ಎಂದಿಗೂ ಜಯವಿದೆ. ಇಡೀ ಭಾರತವೇ ಒಪ್ಪುವಂತಹ ತೀರ್ಪು ಇದಾಗಿದೆ ಎಂದು ಹೇಳಿದರು

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!