ಮೌಂಟೇನ್ ವ್ಹಿವ್ (ಕ್ಯಾಲಿಫೋರ್ನಿಯಾ): ಗೂಗಲ್ ಗೆ ಇಂದು 22ನೇ ಹುಟ್ಟುಹಬ್ಬದ ಸಂಭ್ರಮ.
‘ಗೂಗಲ್’ ಯಾರು, ಏನು ಎಂಬ ಬಗ್ಗೆ ವಿವರ ಅಗತ್ಯವೇ ಇಲ್ಲದ ಕಾರಣ ಇಲ್ಲಿ ನೇರವಾಗಿಯೇ ವಿಷಯ ಪ್ರಸ್ತಾಪಿಸಲಾಗಿದೆ. ಜಗತ್ತಿನ ಈ ಅತಿದೊಡ್ಡ ಸರ್ಚ್ ಎಂಜಿನ್ ಇಂದು ಜನಜೀವನದಲ್ಲಿ ಎಷ್ಟು ಹಾಸುಹೊಕ್ಕಿದೆ ಎಂದರೆ ಗೂಗಲ್ ಇಲ್ಲದ ಜೀವನ ಊಹಿಸಿಕೊಳ್ಳುವುದು ಕಷ್ಟ ಎಂಬಷ್ಟರಮಟ್ಟಿಗೆ.
ಇಂದಿಗೆ ಬರೋಬ್ಬರಿ 22 ವರ್ಷಗಳ ಹಿಂದೆ, 27 ಸೆಪ್ಟೆಂಬರ್ 1998 ರಲ್ಲಿ ಕ್ಯಾಲಿಫೊರ್ನಿಯಾದ ಸ್ಟ್ಯಾನಫೋರ್ಡ್ ವಿವಿಯ ಪಿಹೆಚ್.ಡಿ ಸಂಶೋಧಕರಾಗಿದ್ದ ಲ್ಯಾರಿ ಪೇಜ್ ಮತ್ತು ಸರ್ಜಿ ಬಿನ್ ಎಂಬೆರಡು ಸಂಶೋಧನಾ ವಿದ್ಯಾರ್ಥಿಗಳು ಇದನ್ನು ಸ್ಥಾಪಿಸಿದ್ದರು. ಇದೀಗ ವಿಶ್ವ ವ್ಯಾಪಿಯಾಗಿರುವ ಇದರ ಕೇಂದ್ರ ಕಛೇರಿ ಮೌಂಟೇನ್ ವ್ಹಿವ್ ಕ್ಯಾಲಿಫೋರ್ನಿಯಾದಲ್ಲಿದೆ. ಪ್ರಸ್ತುತ ಭಾರತೀಯ ಮೂಲದ ಅಮೆರಿಕಾ ಉದ್ಯಮಿಯಾಗಿರುವ ಸುಂದರ್ ಪಿಚೈ ಗೂಗಲ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.
ಗೂಗಲ್ ಅಂದರೆ ಏನು?
ಗೂಗಲ್, ಇಂಗ್ಲೀಷ್ ಪದದ google ನ ಅನ್ವರ್ಥ ನಾಮ. google ಎಂದರೆ ಹತ್ತರ ಮುಂದೆ ನೂರು ಸೊನ್ನೆಗಳನ್ನು ಬರೆದಾಗ ಸಿಗುವ ಸಂಖ್ಯೆ. ಇನ್ನೂ ಈ ಗೂಗಲ್ ಸಂಸ್ಥೆ ಇರುವ ಸ್ಥಳದ ಹೆಸರು ಗೂಗಲ್ ಪ್ಲೆಕ್ಸ್. ಇಲ್ಲಿ ಗೂಗಲ್ ಪ್ಲೆಕ್ಸ್ ಎಂದರೆ ಹತ್ತರ ಮುಂದೆ ಹತ್ತು ಸೊನ್ನೆ ಬರೆದು ಆ ಸಂಖ್ಯೆಯ ಎದುರು ನೂರು ಸೊನ್ನೆಗಳನ್ನು ಬರೆದಾಗ ಸಿಗುವ ಸಂಖ್ಯೆ ಎಂದರ್ಥ.