Tuesday, August 16, 2022

Latest Posts

೧೫ ಜನರ ಹೆಸರನ್ನ ಸಿಸಿಬಿ ಅಧಿಕಾರಿಗಳ ಮುಂದೆ ಇಟ್ಟ ಇಂದ್ರಜಿತ್ ಲಂಕೇಶ್, ಅದು ಯಾರು ಯಾರು ಗೊತ್ತಾ? ಇಲ್ಲಿದೆ ಮಾಹಿತಿ

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಇದೆ, ಹಲವು ನಟ-ನಟಿ ಹಾಗೂ ತಂತ್ರಜ್ಞರು ನಶೆಯ ಚಟಕ್ಕೆ ಬಿದ್ದಿದ್ದಾರೆ. ಡೀಲರ್ಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಅಗತ್ಯವಿದ್ದರೆ ಪೊಲೀಸರು ಎಲ್ಲ ವಿವರ ನೀಡಲು ನಾನು ಸಿದ್ಧ ಎಂದು ಹೇಳಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಸಿಸಿಬಿ ಕಚೇರಿಗೆ ಭೇಟಿ ನೀಡಿ ತಮ್ಮ ಬಳಿಯಿದ್ದ ಸಾಕ್ಷ್ಯ ಹಸ್ತಾಂತರಿಸಿದ್ದಾರೆ

ಇಂದ್ರಜಿತ್ ಸಿಸಿಬಿ ಅಧಿಕಾರಗಳ ಎದುರು ವಿಚಾರಣೆಗೆ ಹಾಜರಾಗಿ, ಮಾಹಿತಿ ನೀಡಿದ್ದಾರೆ. ನಂತರ ಮಾತನಾಡಿದ ಅವರು, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ’ಅವರ ತನಿಖೆಗೆ ಬೇಕಾದ ಎಲ್ಲ ಮಾಹಿತಿಗಳನ್ನು ಕೊಟ್ಟಿದ್ದೇನೆ. ನಿನ್ನೆ ಮೊನ್ನೆ ಬಂದ ನಟರು ಡ್ರಗ್ಸ್ ಮಾಫಿಯಾಗೆ ಬ್ರಾಂಡ್ ಅಂಬಾಸಿಡರ್ಗಳು ಆಗಿದ್ದಾರೆ. ನಾನು ಇದುವರೆಗೂ ಹೇಳಿದ ಮಾತಿಗೆ ಬದ್ಧನಾಗಿದ್ದೇನೆ. ನನ್ನ ಬಳಿರುವ ಎಲ್ಲ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಅವರ ತನಿಖೆಗೆ ಸಹಕಾರವಾಗುವಂತೆ ನನಗೆ ತಿಳಿದ ಎಲ್ಲ ಮಾಹಿತಿಗಳನ್ನು ಅವರಿಗೆ ಕೊಟ್ಟಿದ್ದೇನೆ’ ಎಂದಿದ್ದಾರೆ ಇಂದ್ರಜಿತ್.

ಯುವ ನಟರು, ಮಕ್ಕಳು, ವಿದ್ಯಾರ್ಥಿಗಳ ‘ವಿಷ್ಯದ ದೃಷ್ಟಿಯಿಂದ ಡ್ರಗ್ಸ್ ಜಾಲ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದರ ಕುರಿತಾಗಿ ಯುವಜನತೆಗೆ ಅರಿವು ಮೂಡಿಸಬೇಕು. ಅದಕ್ಕಾಗಿ ಏನು ಮಾಡಬೇಕೋ ಮಾಡಿದ್ದೇನೆ. ಆದರೆ, ಈಗ ಕೆಲವರ ಹೆಸರುಗಳನ್ನು ಹೇಳುವುದು ದೊಡ್ಡದಲ್ಲ. ಇದರಿಂದ ತನಿಖೆಗೆ ತೊಂದರೆ ಆಗಲಿದೆ. ಹೆಸರು ಹೇಳಿ ಅವರಿಗೆ ವೈಯಕ್ತಿಕವಾಗಿ ಹರ್ಟ್ ಮಾಡಬೇಕು ಅನ್ನೋ ಉದ್ದೇಶ ನನಗಿಲ್ಲ. ನಾನು ಯಾರಿಗೆ ತಲುಪಿಸಬೇಕೋ ಅವರಿಗೆ ಸಾಕ್ಷಿ ಸಮೇತ, ತಿಳಿಸಿದ್ದೇನೆ. ಇದರಲ್ಲಿ ಯಾರೆಲ್ಲ ‘ಭಾಗಿಯಾಗಿದ್ದಾರೋ, ಅವರೆಲ್ಲರ ಹೆಸರನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಸುಮಾರು ೧೦-೧೫ ಜನರ ಹೆಸರು ಕೊಟ್ಟಿದ್ದೇನೆ. ಅಧಿಕಾರಿಗಳ ಬಳಿಯೂ ಒಂದಷ್ಟು ಮಾಹಿತಿ ಇತ್ತು. ಅವರು ಇದರಲ್ಲಿ ಯಶಸ್ಸು ಪಡೆಯಲಿದ್ದಾರೆ ಎಂಬ ನಂಬಿಕೆ ಇದೆ’ ಎಂದು ಇಂದ್ರಜಿತ್ ತಿಳಿಸಿದ್ದಾರೆ.ಆದರೆ, ಯಾವೆಲ್ಲ ಕಲಾವಿದರ ಹೆಸರುಗಳನ್ನು ಅಧಿಕಾರಿಗಳ ಮುಂದೆ ಇಂದ್ರಜಿತ್ ಹೇಳಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ. ’ನಾನು ಏನೆಲ್ಲ ಮಾಹಿತಿಗಳನ್ನು, ಸಾಕ್ಷಿಗಳನ್ನು ನೀಡಿದ್ದೇನೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನಪಟ್ಟರು ಆ ಬಗ್ಗೆ ನಾನು ಮಾಧ್ಯಮಗಳಿಗೆ ಮಾಹಿತಿ ನೀಡುವುದಕ್ಕೆ ಸಾಧ್ಯವಿಲ್ಲ’ ಎಂದು ಇಂದ್ರಜಿತ್ ತಿಳಿಸಿದ್ದಾರೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss