Wednesday, August 17, 2022

Latest Posts

೫ ವರ್ಷದ ಬಳಿಕ ಮತ್ತೆ ಕಸ್ತೂರಿ ನಿವಾಸ, ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ

೧೯೭೧ರಲ್ಲಿ  ಡಾ.ರಾಜ್‌ಕುಮಾರ್ ನಟಿಸಿದ್ದ   ಕಸ್ತೂರಿ ನಿವಾಸ ಸಿನಿಮಾ. ಸ್ಯಾಂಡಲ್‌ವುಡ್ ಪಾಲಿಗೆ ಈ ಚಿತ್ರ ಅತ್ಯಂತ ಸ್ಮರಣೀಯ. ಅಣ್ಣಾವ್ರ ಅಭಿಮಾನಿಗಳಿಗೆ ಸಾರ್ವಕಾಲಿನ ನೆಚ್ಚಿನ ಚಿತ್ರ. ಇಂತಹ ಎವರ್ಗ್ರೀನ್ ಚಿತ್ರದ ಹೆಸರಿನಲ್ಲಿ ಮತ್ತೊಮ್ಮೆ ಸಿನಿಮಾ ಬರ್ತಿದೆ. ಖ್ಯಾತ ನಿರ್ದೇಶಕ ದಿನೇಶ್ ಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇವರ ಪಾಲಿಗೂ ಈ ಹೊಸ ಚಿತ್ರ ವಿಶೇಷವಾಗಿರಲಿದೆ. ಅಂದ್ಹಾಗೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸುಪ್ರಬಾತ, ಅಮೃತವರ್ಷಿಣಿ, ಲಾಲಿ, ನಿಶ್ಯಬ್ದ, ಪ್ರೇಮೋತ್ಸವ, ಹಾಲಿವುಡ್, ಅಭಿ, ಇನ್ಸ್ ಪೆಕ್ಟರ್ ವಿಕ್ರಂ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ದಿನೇಶ್ ಬಾಬು ಈಗ ತಮ್ಮ ೫೦ನೇ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ’ಕಸ್ತೂರಿ ನಿವಾಸ’ ಎಂದು ಹೆಸರಿಟ್ಟಿದ್ದಾರೆ. ದಿನೇಶ್ ಬಾಬು ನಿರ್ದೇಶನದ ’ಕಸ್ತೂರಿ ನಿವಾಸ’ ಚಿತ್ರಕ್ಕೆ ರಚಿತಾ ರಾಮ್ ಪ್ರಮುಖ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಚ್ಚು ಜೊತೆ ಶ್ರುತಿ ಪ್ರಕಾಶ್ ಹಾಗೂ ಸ್ಕಂದ ಅಶೋಕ್ ಪ್ರಮುಖ ತಾರಬಳಗದಲ್ಲಿ ಇರಲಿದ್ದಾರೆ.

ಕಸ್ತೂರಿ ನಿವಾಸ ಎಂದಾಕ್ಷಣ ಅಣ್ಣಾವ್ರ ಸಿನಿಮಾ ನೆನಪಾಗುತ್ತದೆ. ಆದರೆ, ಹಳೆಯ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂ‘ವಿಲ್ಲ ಎಂದು ದಿನೇಶ್ ಬಾಬು ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ ಅಂತ್ಯಕ್ಕೆ ಚಿತ್ರೀಕರಣ ಸಹ ಶುರುವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಹೆಚ್ಚು ಬ್ಯುಸಿಯಾಗಿದ್ದಾರೆ. ಕನ್ನಡದ ಏಪ್ರಿಲ್, ಎಕ್ ಲವ್ ಯಾ, ಲಿಲ್ಲಿ, ವೀರಂ, ಡಾಲಿ, ೧೦೦ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ತೆಲುಗಿನ ’ಸೂಪರ್ ಮಚ್ಚಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!