ʼಆಜಾನ್‌ ವಿವಾದ: ಮಂದಿರ, ಮಸೀದಿ ಸೇರಿ 301 ಸಂಸ್ಥೆಗಳಿಗೆ ನೋಟಿಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಜ್ಯದಲ್ಲಿ ಆಜಾನ್‌ ವಿವಾದ ಭುಗಿಲೆದ್ದಿದ್ದು, ಒಟ್ಟು 301 ಧಾರ್ಮಿಕ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್‌ ಆಯುಕ್ತರು, ‘ರಾಜ್ಯದ ಮಸೀದಿಗಳು, ದೇವಾಲಯಗಳು, ಚರ್ಚ್ಗಳು ಸೇರಿ ಇತರೆ 301 ಸಂಸ್ಥೆಗಳು ತಮ್ಮ ಧ್ವನಿವರ್ಧಕಗಳನ್ನ ಅನುಮತಿಸಬಹುದಾದ ಡೆಸಿಬಲ್ ಮಟ್ಟದೊಳಗೆ ಬಳಸುವಂತೆ ಪೊಲೀಸರಿಂದ ನೋಟೀಸ್ ಪಡೆದಿದ್ದಾರೆ ಎಂದರು.
ಅದೇ ರೀತಿ 59 ಪಬ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌, 12 ಕೈಗಾರಿಕೆ, 83 ದೇವಾಲಯ, 22 ಚರ್ಚ್‌ ಮತ್ತು 125 ಮಸೀದಿಗಳಿಗೆ ನೋಟಿಸ್‌ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!