ಸ್ಪೈವೇರ್‌ ಗಳಿಂದ ಡೇಟಾ ರಕ್ಷಣೆಗೆ ಆಪಲ್ ನಿಂದ ʼಲಾಕ್‌ ಡೌನ್‌ʼ ಮೋಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚೆಗೆ ಬಳಕೆದಾರರ ಡೇಟಾ ಸೋರಿಕೆ, ಕದಿಯುವಿಕೆಯ ಕುರಿತಾಗಿ ಹೆಚ್ಚಿನ ವರದಿಗಳಾಗುತ್ತಿದ್ದು ಬಳಕೆದಾರರ ಡೇಟಾ ರಕ್ಷಣೆಗೆ ಟೆಕ್‌ ದಿಗ್ಗಜ ಆಪಲ್‌ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ʼಲಾಕ್‌ ಡೌನ್‌ ಮೋಡ್ʼ ಎಂಬ ಹೆಸರಿನ ಹೊಸ ವ್ಯವಸ್ಥೆಯನ್ನು ಆಪಲ್‌ ಪರಿಚಯಿಸಿದ್ದು ಇದು ಅತ್ಯಾಧುನಿಕ ಸ್ಪೈವೇರ್ ಗಳಿಂದ ಬಳಕೆದಾರರ ಡೇಟಾವನ್ನು ರಕ್ಷಿಸಲು ಸಹಾಯಕವಾಗಿದೆ. ಗಂಭೀರ ಡಿಜಿಟಲ್‌ ಭದ್ರತೆಯ ಸಮಸ್ಯೆಯನ್ನು ಎದುರಿಸುತ್ತಿರುವ ಬಳಕೆದಾರಿಗೆ ಇದು ಐಚ್ಛಿಕ ರಕ್ಷಣೆಯಾಗಿದೆ ಎಂದು ಆಪಲ್‌ ಹೇಳಿದೆ.

ಪೆಗಾಸಸ್‌ ಹಾಗೆಯೇ ಕೆಲಸ ಸರ್ಕಾರಿ ಮಾಲ್‌ ವೇರ್‌ ಗಳಿಂದಲೂ ರಕ್ಷಣೆ ಪಡೆಯಲು ಅನುಕೂಲವಾಗುವಂತೆ ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ. ಇದು ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಆಪಲ್ ಮ್ಯಾಕ್‌ಗಳಲ್ಲಿನ ಸಾಧನ ರಕ್ಷಣೆಯನ್ನು ಗಟ್ಟಿಗೊಳಿಸುತ್ತದೆ ಮತ್ತು ಕೆಲವು ಕಾರ್ಯಗಳನ್ನು ಕಟ್ಟುನಿಟ್ಟಾಗಿ ಮಿತಿಗೊಳಿಸುತ್ತದೆ” ಎಂದು Apple ವಿವರಿಸಿದೆ. ಮುಖ್ಯವಾಗಿ ಸಂದೇಶಗಳು, ವೆಬ್ ಬ್ರೌಸಿಂಗ್ ಮತ್ತು FaceTime ಮತ್ತು ಕರೆಗಳಂತಹ Apple ಸೇವೆಗಳಿಗೆ ಮಾಲ್‌ವೇರ್‌ ಗಳ ಪ್ರವೇಶವನ್ನು ನಿರ್ಬಂಧಿಸುತ್ತದೆ.

ಈ ಹಿಂದೆ ಇತರ ಟೆಕ್‌ ಕಂಪನಿಗಳೂ ಕೂಡ ಬಳಕೆದಾರರ ಡೇಟಾ ರಕ್ಷಣೆಗೆ ಬೇರೆ ಬೇರೆ ಕ್ರಮ ಕೈಗೊಂಡಿದ್ದವು ಫಿಶಿಂಗ್, ಆಕಸ್ಮಿಕ ಹಂಚಿಕೆ ಮತ್ತು ಖಾತೆಗಳಿಗೆ ಮೋಸದ ಪ್ರವೇಶವನ್ನು ತಡೆಗಟ್ಟಲು Google 2017 ರಲ್ಲಿ ಸುಧಾರಿತ ರಕ್ಷಣೆಯನ್ನು ಪರಿಚಯಿಸಿತು. ಮೈಕ್ರೋಸಾಫ್ಟ್ ಕೂಡ ಅದೇ ರೀತಿಯ ಸುರಕ್ಷಿತ ಬ್ರೌಸಿಂಗ್ ಅನುಭವವನ್ನು ನೀಡಲು ಎಡ್ಜ್ ಬ್ರೌಸರ್‌ನಲ್ಲಿ ಸೂಪರ್ ಡ್ಯೂಪರ್ ಸೆಕ್ಯೂರ್ ಮೋಡ್‌ ಅನ್ನು ಪರಿಚಯಿಸಿತ್ತು.

ಪ್ರಸ್ತುತ ಆಪಲ್‌ ಲಾಕ್‌ ಡೌನ್‌ ಮೋಡ್‌ ವೈಶಿಷ್ಟ್ಯವು Apple iPhone, iPad ಮತ್ತು Apple Macs ಗಳಿಗೆ ಲಭ್ಯವಾಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!