ʼಬೇರೆ ಆಯ್ಕೆಗಳಿಲ್ಲʼ: ಟ್ವೀಟರ್‌ ಉದ್ಯೋಗ ಕಡಿತವನ್ನು ಸಮರ್ಥಿಸಿಕೊಂಡ ಎಲಾನ್‌ ಮಸ್ಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಸ್ತುತ ಜಾಗತಿಕವಾಗಿ ಚರ್ಚೆಗೆ ಕಾರಣವಾಗಿರುವ ಉದ್ಯೋಗಿಗಳ ಕಡಿತವನ್ನು ಟ್ವಿಟರ್‌ನ ಹೊಸ ಮಾಲೀಕ ಎಲೋನ್ ಮಸ್ಕ್ ಸಮರ್ಥಿಸಿಕೊಂಡಿದ್ದಾರೆ. ʼಕಂಪನಿಯು ಪ್ರತಿದಿನ ಮಿಲಿಯನ್‌ ಡಾಲರ್‌ ಗಳಷ್ಟು ಕಳೆದುಕೊಳ್ಳುತ್ತಿದೆ. ಆದ್ದರಿಂದ ಈ ಕಡಿತಗಳು ಅಗತ್ಯವಾಗಿದ್ದು ಬೇರೆ ಆಯ್ಕೆಗಳಿಲ್ಲʼ ಎಂದಿದ್ದಾರೆ.

ಟ್ವೀಟರ್‌ ನಿಂದ 50 ಶೇ. ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಟ್ವೀಟ್‌ ಮಾಡಿರುವ ಮಸ್ಕ್ “ಕಡಿತದಿಂದ ಕೆಲಸ ಕಳೆದುಕೊಂಡಿರುವ ಎಲ್ಲರಿಗೂ ಮೂರು ತಿಂಗಳ ಬೇರ್ಪಡಿಕೆ ವೇತನವನ್ನು ನೀಡಲಾಗುತ್ತದೆ. ಇದು ಇದು ಕಾನೂನುಬದ್ಧವಾಗಿ ಅಗತ್ಯಕ್ಕಿಂತ 50 ಪ್ರತಿಶತ ಹೆಚ್ಚಿನ ಮೊತ್ತವಾಗಿದೆ” ಎಂದಿದ್ದಾರೆ.

“ಕಂಪನಿಯು ದಿನವೊಂದಕ್ಕೆ 4 ಮಿಲಿಯನ್‌ ಡಾಲರ್‌ ನಷ್ಟು ಕಳೆದುಕೊಳ್ಳುತ್ತಿದೆ. ಹಾಗಾಗಿ ದುರದೃಷ್ಟವಶಾತ್‌ ಬೇರೆ ಆಯ್ಕೆಗಳಿಲ್ಲ” ಎಂದಿದ್ದಾರೆ.

44 ಬಿಲಿಯನ್‌ ಡಾಲರ್‌ ಗೆ ಸಾಮಾಜಿಕ ಮಾಧ್ಯಮವನ್ನು ಖರೀದಿಸಿದ ಮಸ್ಕ್ ಸಂಪೂರ್ಣ ಟ್ವೀಟರ್‌ ನ ಚುಕ್ಕಾಣಿ ಹಿಡಿದ ನಂತರ ಅನೇಕ ಬದಲಾವಣೆಗಳು ನಡೆದಿವೆ. ಪ್ರಮುಖ ಎಕ್ಸೆಕ್ಯೂಟಿವ್‌ ಗಳನ್ನು ಹೊರಹಾಕುವುದರಿಂದ ಹಿಡಿದು ಕಂಟೆಂಟ್‌ ಮಾಡರೇಷನ್‌ ಕೌನ್ಸಿಲ್‌ ಪ್ರಸ್ತಾಪ, ಬ್ಲೂಟಿಕ್‌ ಗೆ ಶುಲ್ಕ ವಿಧಿಸುವಕೆಯಲ್ಲಿ ಬದಲಾವಣೆ ಹಾಗೂ ಪ್ರಸ್ತುತ ಉದ್ಯೋಗ ಕಡಿತದವರೆಗೆ ಈ ವರೆಗೆ ಹಲವು ಮಹತ್ತರ ಬದಲಾವಣೆಗಳಾಗಿದ್ದು ಇನ್ನೂ ಅನೇಕ ಬದಲಾವಣೆಗಳು ನಡೆಯಲಿವೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!