ಅಂದು ತಾಜ್ ಮಹಲ್ ಮುಂದೆ ಗಲೀಜು ಎಂದವಳು ಇಂದು ಏನಂದಳು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಬದಲಾವಣೆಗಳು ನಾನಾ ರೀತಿಯಲ್ಲಿ ನಡೆಯುತ್ತಿದೆ. ಅದೇ ರೀತಿ ಪ್ರಧಾನಿ ಮೋದಿ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ಮಹತ್ತರ ಬದಲಾವಣೆ ಕಾಣುತ್ತಿದ್ದೇವೆ. ಹಂತಹ ಒಂದು ಬದಲಾವಣೆ ಸ್ವಚ್ಛತೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಫ್ಟರ್, ಬಿಫೋರ್ ಅನ್ನೋ ಫೋಟೋಗಳು ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಸಾಮಾಜಿಕ ಕಾರ್ಯಕರ್ತೆ ತಾಜ್​ಮಹಲ್​ 10 ವರ್ಷದ ಹಿಂದಿನ ಮತ್ತು ಇತ್ತೀಚೆಗಿನ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಲಿಸಿಪ್ರಿಯಾ ಕಂಗುಜಮ್ ಎನ್ನುವರು ಓರ್ವ ಹವಾಮಾನ ವಿಶೇಷಜ್ಞೆ. ಇತ್ತೀಚೆಗೆ ಇವರು ತಾಜ್​​ಮಹಲ್​ ಎದುರು ನಿಂತಿರುವ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ, ಜೊತೆಗೆ ಹತ್ತು ವರ್ಷದ ಹಿಂದೆ ಅದೇ ಜಾಗದಲ್ಲಿ ನಿಂತಿದ್ದ ಫೋಟೋವನ್ನ ಕೂಡಾ ಹಾಕಿದ್ದಾರೆ. ಅಂದು ಪ್ಲಾಸ್ಟಿಕ್, ಕಸಕಡ್ಡಿಗಳಿಂದ ತುಂಬಿ ಹೋಗಿದ್ದ ಜಾಗ, ಇಂದು ಸ್ವಚ್ಛವಾಗಿ ಸುಂದವಾಗಿದೆ.

 

ಅಂದು ಇದೇ ಜಾಗದಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಪರಿಸರ ಮಾಲಿನ್ಯದ ಕುರಿತು ಫಲಕ ಹಿಡಿದು ಎಲ್ಲರ ಗಮನ ಸೆಳೆದಿದ್ದರು ಲಿಸಿಪ್ರಿಯಾ. ಆ ಫೋಟೋ ವೈರಲ್ ಆಗಿತ್ತು. ಇಂದು ಅದರ ಎಫೆಕ್ಟ್ ಆ ಪ್ರದೇಶದಲ್ಲಿ ಪ್ಲಾಸ್ಟಿಕ್ ಮುಕ್ತ ಕಂಗೊಳಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!