ಅಕ್ರಮ ಗೋ ಹತ್ಯೆ ಸಾಬೀತಾದರೆ ಆಸ್ತಿ ಮುಟ್ಟುಗೋಲು: ಡಾ.ಭರತ್ ಶೆಟ್ಟಿ ವೈ. ಎಚ್ಚರಿಕೆ

ಹೊಸದಿಗಂತ ವರದಿ,ಮಂಗಳೂರು:

ರಾಜ್ಯ ಸರಕಾರದ ನೂತನ ಗೋ ಹತ್ಯೆ ಕಾಯಿದೆ ಪ್ರಕಾರ ಗೋ ಕಳ್ಳತನ, ಅಕ್ರಮ ಕಸಾಯಿಖಾನೆ ನಡೆಸುವುದು, ಅಕ್ರಮ ಸಾಗಾಟ ಮತ್ತಿತರ ಪ್ರಕರಣದಲ್ಲಿ ತೊಡಗಿಸಿಕೊಂಡರೆ ಅಂತಹವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಕಾಯಿದೆಯನ್ನು ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಖಡಕ್ ಆದೇಶ ನೀಡಿದ್ದಾರೆ.
ಇನ್ನು ಮುಂದೆ ಅಕ್ರಮವಾಗಿ ಗೋ ಹತ್ಯೆ,ಕಳ್ಳತನ ನಿಲ್ಲಿಸಬೇಕು. ಅಪರಾಧ ಪ್ರಕರಣ ನಿಯಂತ್ರಣಕ್ಕೆ ತರಲು ಈ ಕಠಿಣ ಅಸ್ತ್ರಗಳ ಬಳಕೆ ಮಾಡುತ್ತೇವೆ. ಹೈನುಗಾರಿಕೆ ನಡೆಸಿ ಜೀವನ ನಿರ್ವಹಿಸುವವರ ಹಟ್ಟಿಯಿಂದ ದನ ಕದಿಯುವುದನ್ನು, ಬೀಡಾಡಿ ದನಗಳನ್ನು ಕದ್ದು ಹತ್ಯೆ ಮಾಡುವುದು ಯಾವುದೇ ಕಾರಣಕ್ಕೂ ಸಹಿಸಲಾಗದು.
ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡರೆ ಅಂತವರ ಆಸ್ತಿ ಮುಟ್ಟುಗೋಲು ದಂಡಾಸ್ತ್ರ ಪ್ರಯೋಗಿಸುವಂತೆ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!