ಅನರ್ಹತೆಯ ಬೇಡಿಕೆಯಿಂದ ಆದಿತ್ಯ ಠಾಕ್ರೆಯನ್ನು ಹೊರಗಿಟ್ಟಿದ್ದೇಕೆ ಶಿಂಧೆ ಬಣ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶಿವಸೇನೆಯ ಶಾಸಕರ ಸಂಖ್ಯೆಯಲ್ಲಿ ಹೆಚ್ಚಿನವರು ಬಂಡಾಯವೆದ್ದಿದ್ದರಿಂದ ಉದ್ಧವ್‌ ಠಾಕ್ರೆ ಬೆಂಬಲದಲ್ಲಿ ಬೆರಳೆಣಿಕೆಯಷ್ಟು ಶಾಸಕರು ಮಾತ್ರವೇ ಉಳಿದಿದ್ದರು. ಆದರೆ ಈಗ ಈಗ ಅವರ ಪುತ್ರ ಹಾಗೂ ವರ್ಲಿ ಕ್ಷೇತ್ರದ ಶಾಸಕರಾಗಿರುವ ಆದಿತ್ಯ ಠಾಕ್ರೆಯನ್ನು ಹೊರತುಪಡಿಸಿದರೆ ಉದ್ಧವ್‌ ಬೆಂಬಲಿಗರ ಸಂಖ್ಯೆ ಶೂನ್ಯವಾಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಶಿವಸೇನೆಯ ವಿಭಜನೆ ಕುರಿತು ಸುಪ್ರಿಂ ಕೋರ್ಟ್‌ ನಲ್ಲಿ ವಿಚಾರಣೆ ಬಾಕಿಯಿದ್ದರೂ ಹೊಸದಾಗಿ ಆಯ್ಕೆಯಾಗಿರುವ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರು ಉದ್ಧವ್‌ ಅವರಿಗೆ ನಿಷ್ಠರಾಗಿರುವ 14 ಸೇನಾ ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಆದರೆ, ಆದಿತ್ಯ ಠಾಕ್ರೆ ಅವರು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಮೊಮ್ಮಗ ಆಗಿರುವುದರಿಂದ ಅವರಿಗೆ ಅನರ್ಹತೆಯ ನೋಟಿಸ್ ಕಳುಹಿಸಲಾಗುವುದಿಲ್ಲ ಎಂದು ಬಂಡಾಯ ಬಣ ಹೇಳಿದೆ ಎಂದು ಮೂಲಗಳು ವರದಿ ಮಾಡಿವೆ.

ಕಳೆದ ಎರಡು ವಾರಗಳಲ್ಲಿ, ಶಿವಸೇನೆಯ 55 ಶಾಸಕರಲ್ಲಿ 40 ಮಂದಿ ಏಕನಾಥ್ ಶಿಂಧೆ ಅವರ ಬಣವನ್ನು ಸೇರಿಕೊಂಡಿದ್ದಾರೆ. ಶಿಂಧೆ ನೇತೃತ್ವದ ಬಣವು ತಮ್ಮದೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸಿದ್ದು ಉಳಿದ ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಅನರ್ಹಗೊಳಿಸಬೇಕು ಎಂದು ಹೇಳಿದ್ದಾರೆ.

ಶಿಂಧೆಯವರನ್ನೇ ಶಿವಸೇನೆಯ ನಾಯಕ ಎಂದು ಸ್ಪೀಕರ್‌ ಪರಿಗಣಿಸಿದ್ದಾರೆ. ಆದರೆ ನಾರ್ವೇಕರ್‌ ಅವರ ಆಯ್ಕೆಯನ್ನು ಎಂವಿಎ ಬಣವು ಸುಪ್ರಿಂ ಕೋರ್ಟ್‌ ನಲ್ಲಿ ಪ್ರಶ್ನಿಸಿದೆ. ಆಧಿತ್ಯ ಠಾಕ್ರೆ ಅವರ ಕುರಿತಾಗಿನ ವಿಷಯ ಸ್ವಲ್ಪ ಗೊಂದಲಮಯವಾಗಿದೆ. ಅವರು ಶಾಸಕರಾಘಿ ಸದನದಲ್ಲಿ ಮುಂದುವರೆಯುತ್ತಾರಾದರೂ ಶಿವಸೇನೆಯ ಶಾಸಕರೆಂದು ಗುರುತಿಸಿಕೊಳ್ಳುವುದರ ಕುರಿತು ಗೊಂದಲಗಳು ವ್ಯಕ್ತವಾಗಿವೆ. ಸೋಮವಾರ ಶಿಂಧೆ ನೇತೃತ್ವದ ಬಣದ ಮುಖ್ಯ ಸಚೇತಕ ಭರತ್ ಗೊಗವಾಲೆ ಅವರು 14 ಸೇನಾ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದಾರೆ. ಈ ಪಟ್ಟಿಯಲ್ಲಿ ಆದಿತ್ಯ ಠಾಕ್ರೆಯವರ ಹೆರನ್ನು ಹೊರತುಪಡಿಸಲಾಗಿದೆ. ಶಿಂಧೆ ಬಣದ ಶಾಸಕರು ಜೂನಿಯರ್ ಠಾಕ್ರೆ ವಿರುದ್ಧ ಅವರ ವಂಶಾವಳಿಯ ಮೇಲಿರುವ ಗೌರವದಿಂದ ಅನರ್ಹತೆಯ ಪ್ರಕ್ರಿಯೆಗಳನ್ನು ಪ್ರಾರಂಭಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಉದ್ಧವ್‌ ಬಣದಲ್ಲಿರುವವರು ಶಿವಸೇನೆಯ ಕಾರ್ಯಕರ್ತರಿಂದ ಬಂಡಾಯ ಶಾಸಕರಿಗೆ ಹಿನ್ನಡೆಯಾಗಬಹುದು ಎಂಬ ಭಯದಿಂದ ಆದಿತ್ಯ ಠಾಕ್ರೆಯವರನ್ನು ಹಾಗೇ ಉಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!