ಅಮಿತಾಬ್​ -​ ರಶ್ಮಿಕ ಅಭಿನಯದ ಗುಡ್​ ಬೈ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ನ ಖ್ಯಾತ ನಟ ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಗುಡ್​ ಬೈ’ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆಯಾಗಿದೆ.
ಬಾಲಿವುಡ್​ನ ಬಿಗ್​​ ಬಿ ಅಮಿತಾಬ್​ ಬಚ್ಚನ್​ ತಮ್ಮ ಟ್ವಿಟರ್​​ ಖಾತೆಯಲ್ಲಿ ಚಿತ್ರದ ಪೋಸ್ಟರ್​ನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪೋಸ್ಟರ್​ನಲ್ಲಿ ಬಚ್ಚನ್​ ಗಾಳಿಪಟ ಹಾರಿಸುತ್ತಿದ್ದು, ರಶ್ಮಿಕಾ ಗಾಳಿಪಟದ ನೂಲಿನ ಬಂಡಲ್​ನ್ನು ಹಿಡಿದಿರುವುದು ಕಾಣಬಹುದಾಗಿದೆ. ಇನ್ನು ಪೋಸ್ಟರ್​ಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ. ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರ ಬಾಲಿವುಡ್​ನ ಮೊದಲ ಚಿತ್ರ ಇದಾಗಿದ್ದು, ಮೊದಲ ಚಿತ್ರದಲ್ಲೇ ಬಿಗ್​ ಬಿ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!