ಆ್ಯಪ್ ಆಧಾರಿತ ಸೇವೆಗೆ ಚಾಲನೆ ನೀಡಲು ಬೆಂಗಳೂರು ಮಹಾನಗರ ಆಟೋ ಚಾಲಕರ ಒಕ್ಕೂಟ ನಿರ್ಧಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು ನಗರದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಗಳಾಗಿರುವ ಓಲಾ ಮತ್ತು ಉಬರ್​ಗಳಿಂದ ಇರುವ ಸ್ಪರ್ಧೆ ಎದುರಿಸಲು ತಮ್ಮದೇ ಮೊಬೈಲ್ ಆ್ಯಪ್ ಲಾಂಚ್ ಮಾಡಲು ಬೆಂಗಳೂರು ಮಹಾನಗರದ ಆಟೋ ಚಾಲಕರು ನಿರ್ಧರಿಸಿದ್ದಾರೆ.

ನಂದನ್ ನಿಲೇಕಣಿ ಬೆಂಬಲಿತ ಬೆಕ್ನ್ ಪ್ರತಿಷ್ಠಾನದ ನೆರವಿನೊಂದಿಗೆ ನಗರದ ಆಟೋರಿಕ್ಷಾ ಚಾಲಕರ ಒಕ್ಕೂಟ ‘ನಮ್ಮ ಯಾತ್ರಿ ಆ್ಯಪ್’ ಅನ್ನ ಲಾಂಚ್ ಮಾಡುವ ಯೋಜನೆ ಹಾಕಿಕೊಂಡಿದೆ. ನವೆಂಬರ್ 1ರಂದು ನೂತನ ಆ್ಯಪ್ ಲಾಂಚ್ ಆಗಲಿದೆ ಎನ್ನಲಾಗಿದ್ದು, ಆ್ಯಪ್ ಆಧಾರಿತ ಕ್ಯಾಬ್ ಸಂಸ್ಥೆಗಳು ಗ್ರಾಹಕರಿಂದ ರೂ. 100 ಕನಿಷ್ಠ ದರವನ್ನು ಪಡೆದು ಅದರಲ್ಲಿ ರೂ. 60 ಅನ್ನು ಆಟೋ ಚಾಲಕರಿಗೆ ನೀಡುತ್ತವೆ. ಉಳಿದ ರೂ. 40 ಅನ್ನು ಕಮೀಷನ್ ರೂಪದಲ್ಲಿ ಪಡೆಯುತ್ತವೆ. ಆಟೋ ಚಾಲಕರು ರೂ. 40 ಗಳಿಗಾಗಿ ಆಟೋ ಓಡಿಸಬೇಕಾಗುತ್ತದೆ. ಅವರು ದರವನ್ನು ಹೆಚ್ಚಿಸಿದ ಬಳಿಕ ಗ್ರಾಹಕರ ಸಂಖ್ಯೆ ಶೇ. 50-60ರಷ್ಟು ಕುಸಿದಿದೆ.

ಈಗಾಗಲೇ ಆಟೋ ಚಾಲಕರ ಸಂಘ ಸಾರಿಗೆ ಇಲಾಖೆಗೆ ದೂರು ಸಲ್ಲಿಸಿದರೂ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ತಮ್ಮದೇ ಆ್ಯಪ್​ಗೆ ಚಾಲನೆ ನೀಡಲು ಆಟೋ ಚಾಲಕರು ನಿರ್ಧರಿಸಿದ್ದಾರೆ‌.

2017ರಲ್ಲಿ ನಮ್ಮ ಟೈಗರ್ ಹೆಸರಿನಲ್ಲಿ ಲಾಂಚ್ ಆಗಿದ್ದ ಆ್ಯಪ್ ಆಧರಿತ ಟ್ಯಾಕ್ಸಿ ಮತ್ತು ಆಟೋ ಸೇವೆ ವಿಫಲವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!