ಎಐಎಡಿಎಂಕೆಯ ಏಕೈಕ ಸಂಸದ ಸೇರಿ 18 ಮಂದಿಯನ್ನು ವಜಾಗೊಳಿಸಿದ ಪಳನಿಸ್ವಾಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಕ್ಷದ ತತ್ವ, ಉದ್ದೇಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಹಾಗೂ ಪಕ್ಷದ ಘನತೆಗೆ ಚ್ಯುತಿ ತರುವಂತೆ ನಡೆದುಕೊಂಡ 18 ಮಂದಿಯನ್ನು ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವಜಾಗೊಳಿಸಿದ್ದಾರೆ.
ಈ 18 ಪದಾಧಿಕಾರಿಗಳಲ್ಲಿ ಓ ಪನ್ನೀರಸೆಲ್ವಂ ಅವರ ಪುತ್ರರಾದ ಎಐಎಡಿಎಂಕೆಯ ಏಕೈಕ ಲೋಕಸಭಾ ಸಂಸದ ಒ ಪಿ ರವೀಂದ್ರನಾಥ್ ಮತ್ತು ಐವರು ಜಿಲ್ಲಾ ಕಾರ್ಯದರ್ಶಿಗಳು ಸೇರಿದ್ದಾರೆ.
ಪನ್ನೀರಸೆಲ್ವಂ ಅವರ ಕಿರಿಯ ಪುತ್ರ ವಿ ಪಿ ಜಯಪ್ರದೀಪ್, ಓ ಪನ್ನೀರಸೆಲ್ವಂ ಅವರ ಆಪ್ತ ಸಯ್ಯದ್ ಖಾನ್, ಥೇಣಿ ಜಿಲ್ಲಾ ಎಐಎಡಿಎಂಕೆ ಕಾರ್ಯದರ್ಶಿ, ಮಾಜಿ ಸಚಿವ ವೆಲ್ಲಮಂಡಿ ಎನ್ ನಟರಾಜನ್, ಪೆರಂಬಲೂರು ಜಿಲ್ಲಾ ಕಾರ್ಯದರ್ಶಿ ಆರ್‌ಟಿ ರಾಮಚಂದ್ರನ್ ಅವರು ಪಕ್ಷದಿಂದ ಉಚ್ಛಾಟಿತರಾದ ಪ್ರಮುಖರು ಎಲ್ಲಾ 18 ನಾಯಕರು.
ಪಕ್ಷದ ಗುರಿಗಳು ಮತ್ತು ನೀತಿಗಳಿಗೆ ವಿರುದ್ಧವಾಗಿ ವರ್ತಿಸುವುದಕ್ಕಾಗಿ ಇವರನ್ನು ಎಐಎಡಿಎಂಕೆಯ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗುತ್ತಿದೆ. ಅವರು ಎಐಎಡಿಎಂಕೆಗೆ ಅಪಖ್ಯಾತಿಯನ್ನೂ ತಂದಿದ್ದಾರೆ ಎಂದು ಪಳನಿಸ್ವಾಮಿ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಉಚ್ಚಾಟಿತ ಪದಾಧಿಕಾರಿಗಳೊಂದಿಗೆ ಪಕ್ಷದ ಕಾರ್ಯಕರ್ತರು ಸಂಪರ್ಕದಲ್ಲಿರಬಾರದು ಎಂದು ಸೂಚನೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!