ಏ.7ರಂದು ರಿಲೀಸ್​ ಆಗಲಿದೆ ‘ವೀರಂ’ ಸಿನೆಮಾ

ಹೊಸ ದಿಗಂತಹ ಡಿಜಿಟಲ್ ಡೆಸ್ಕ್ :

‘ವೀರಂ’ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​ ಅವರಿಗೆ ಮಾಸ್​ ಲುಕ್​ ಇದೆ. ಈ ಚಿತ್ರಕ್ಕೆ ಶಶಿಧರ್​ ಕೆ.ಎಂ. ಬಂಡವಾಳ ಹೂಡಿದ್ದು, ಕುಮಾರ್​ ರಾಜ್​ ನಿರ್ದೇಶನ ಮಾಡಿದ್ದಾರೆ. ‘ಡೈನಾಮಿಕ್​ ಪ್ರಿನ್ಸ್​’ ಪ್ರಜ್ವಲ್​ ದೇವರಾಜ್ ​ ಅವರು ನಟಿಸಿರುವ ‘ವೀರಂ’ ಚಿತ್ರ ಏಪ್ರಿಲ್​ 7ರಂದು ಈ ಚಿತ್ರ ಅದ್ದೂರಿಯಾಗಿ ರಿಲೀಸ್​ ಆಗಲಿದೆ.

ಈ ಬಹುನಿರೀಕ್ಷಿತ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಈಗಾಗಲೇ ಟೀಸರ್​, ಪೋಸ್ಟರ್​ ಮತ್ತು ಹಾಡಿನ ಮೂಲಕ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಅದರಲ್ಲೂ ‘ಸಾಹಸ ಸಿಂಹ’ ವಿಷ್ಣುವರ್ಧನ್​ ಅಭಿಮಾನಿಗಳು ‘ವೀರಂ’ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್ ​ ಅವರು ವಿಷ್ಣುವರ್ಧನ್​ ಫ್ಯಾನ್​ ಆಗಿ ಕಾಣಿಸಿಕೊಂಡಿರುವುದೇ ಅದಕ್ಕೆ ಕಾರಣ. ಅವರ ಕೈ ಮೇಲೆ ಇರುವ ವಿಷ್ಣು ದಾದಾ ಟ್ಯಾಟೂ ಕೂಡ ಗಮನ ಸೆಳೆಯುತ್ತಿದೆ.

ರಿಲೀಸ್​ ಡೇಟ್​ ತಿಳಿಸುವ ಸಲುವಾಗಿ ‘ವೀರಂ’ ಚಿತ್ರತಂಡದವರು ಹೊಸ ಪೋಸ್ಟರ್​ ಹಂಚಿಕೊಂಡಿದ್ದಾರೆ. ಅದು ತುಂಬ ಮಾಸ್​ ಆಗಿದೆ. ಕಾರಿನ ಮೇಲೆ ಪ್ರಜ್ವಲ್​ ದೇವರಾಜ್​ ನಿಂತಿದ್ದಾರೆ. ಸುತ್ತಲೂ ಜನಜಂಗುಳಿ ಇದೆ. ಹಿಂಬದಿಯಲ್ಲಿ ವಿಷ್ಣುವರ್ಧನ್​ ಅಭಿನಯದ ‘ಬಂಧನ’ ಸಿನಿಮಾದ ಪೋಸ್ಟರ್​ ಕಾಣಿಸಿದೆ. ಸಿನಿಮಾದಲ್ಲಿ ಈ ಸೀನ್​ ಹೇಗೆ ಬಂದಿರಬಹುದು ಎಂಬ ಕೌತುಕ ಸೃಷ್ಟಿ ಆಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ‘ವೀರಂ’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊವಿಡ್​ ಮುಂತಾದ ಕಾರಣಗಳಿಂದಾಗಿ ರಿಲೀಸ್​ ದಿನಾಂಕ ಮುಂದೂಡುವುದು ಅನಿವಾರ್ಯ ಆಯಿತು. ಈಗ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದ್ದೂರಿಯಾಗಿ ರಿಲೀಸ್​ ಮಾಡಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!