ಐಟಿ ನೋಟೀಸ್ ಕಂಡು `ಪ್ರೇಮ ಪತ್ರ’ ಬಂದಿದೆ ಎಂದು ವ್ಯಂಗ್ಯವಾಡಿದ ಶರದ್ ಪವಾರ್!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆದಾಯ ತೆರಿಗೆ (ಐಟಿ) ಇಲಾಖೆಯು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ನೋಟಿಸ್ ಜಾರಿ ಮಾಡಿದೆ. ಮಹಾರಾಷ್ಟ್ರ ಸಿಎಂ ಆಗಿ ಏಕನಾಥ್ ಶಿಂಧೆ ಅಧಿಕಾರ ವಹಿಸಿಕೊಂಡ 24 ಗಂಟೆ ಕಳೆಯುವ ಮೊದಲೇ ಪವಾರ್ ಅವರಿಗೆ ಐಟಿ ಶಾಕ್ ನೀಡಿದ್ದು,  2004, 2009, 2014, 2020 ರ ಚುನಾವಣೆಯ ಸಮಯದಲ್ಲಿ ಶರದ್ ಪವಾರ್ ಸಲ್ಲಿಸಿರುವ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಐಟಿ ಇಲಾಖೆಯಿಂದ ತಮಗೆ ನೋಟಿಸ್ ಬಂದಿರುವುದನ್ನು ಸ್ವತಃ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಮರಾಠಿ ಭಾಷೆಯಲ್ಲಿ ಪ್ರೇಮ ಪತ್ರ ಬಂದಿದೆ ಎಂದು ವರ್ಣಿಸಿದ್ದಾರೆ. ಐಟಿ ಇಲಾಖೆ ತಮಗೆ ನೋಟಿಸ್‌ ಕಳುಹಿಸಿರುವ ಕುರಿತು ಶರತ್‌ ಪವಾರ್‌ ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ನಿರೀಕ್ಷೆಯಂತೆಯೇ ಐಟಿ ಇಲಾಖೆಯಿಂದ ನೋಟಿಸ್ ಬಂದಿದೆ. ಇದರ ಬಗ್ಗೆ ಚಿಂತೆಪಡುವ ಅಗತ್ಯ ಇಲ್ಲ ಎಂದು ಬರೆದುಕೊಂಡಿದ್ದಾರೆ.

ಗುರುವಾರ (ಜುಲೈ 30, 2022) ರಾತ್ರಿ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಯಿತು. ಹೊಸ ಸರ್ಕಾರ ರಚನೆಯಾದ ಕೆಲವೇ ಗಂಟೆಗಳಲ್ಲಿ ಶರದ್ ಪವಾರ್ ಅವರಿಗೆ ಐಟಿ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.  ಸಿಎಂ ಉದ್ಧವ್ ಅಧಿಕಾರಾವಧಿಯಲ್ಲಿ ಕೈಗೊಂಡ ನಿರ್ಧಾರಗಳ ಮೇಲೆ ನೂತನ ಸಿಎಂ ಶಿಂಧೆ ಕಣ್ಣಿಟ್ಟಿದ್ದಾರೆಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!