ಕತ್ತಿಯವರನ್ನು ರಾಜಕೀಯ ಅಂಗಳಕ್ಕೆ ಕರೆತಂದಿತ್ತು ತಂದೆಯ ಅಕಾಲಿಕ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಮೇಶ್ ಕತ್ತಿ ಅಂದುಕೊಂಡದ್ದನ್ನು ಸಾಧಿಸುವ ಛಲವಾದಿ ರಾಜಕಾರಣಿ.
ಹುಕ್ಕೇರಿ ಶಾಸಕರಾಗಿದ್ದ ತಂದೆ ವಿಶ್ವನಾಥ್ ಕತ್ತಿ ಅವರ ಅಕಾಲಿಕ ನಿಧನ ಅವರನ್ನು ರಾಜಕಾರಣದ ಅಂಗಳ ಪ್ರವೇಶಿಸುವಂತೆ ಮಾಡಿತ್ತು. 1985ರಲ್ಲಿ ಹುಕ್ಕೇರಿ ಕ್ಷೇತ್ರದಿಂದ ಜನತಾ ಪಕ್ಷದಿಂದ ಕತ್ತಿ ಚುನಾವಣಾ ಕಣಕ್ಕಿಳಿದಿದ್ದರಲ್ಲದೆ, ತಮ್ಮ ಮೊದಲ ಯತ್ನದಲ್ಲೇ ವಿಜಯದ ಮಾಲೆ ಕೊರಳಿಗೇರಿಸಿಕೊಂಡಿದ್ದರು. ಬಳಿಕ 1989ರಲ್ಲಿ ಎರಡನೇ ಬಾರಿಗೂ ವಿಜಯ ಅವರಿಗೆ ಒಲಿದಿತ್ತು. ಬಳಿಕ 1994ರಲ್ಲಿ ಮತ್ತೆ ಗೆಲುವು ಸಾಽಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದರು. ಮುಂದೆ 1999ರಲ್ಲಿಯೂ ಗೆಲುವು ಅವರದ್ದೇ ಆಗಿತ್ತು. 2004ರ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಕತ್ತಿ ಕೇವಲ 821 ಮತಗಳಿಂದ ಮೊದಲ ಬಾರಿಗೆ ಸೋಲುಂಡಿದ್ದರು. ಬಳಿಕ 2008ರಲ್ಲಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಳಿಕ 2013 ಮತ್ತು 2018ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!