ಕನ್ನಡದ ಬೆನ್ನಲ್ಲೇ ಹಿಂದಿಯಲ್ಲೂ ಬಿಗ್​ ಬಾಸ್ 16 ಆರಂಭ: ಪ್ರೋಮೋ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ 16 ಪ್ರೋಮೋ ರಿಲೀಸ್ ಆಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಆದರೆ ಶೋ ಪ್ರಸಾರ ದಿನಾಂಕ ಮತ್ತು ಸ್ಪರ್ಧಿ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಬಿಗ್ ಬಾಸ್ ಸೀಸನ್ 16 ತಯಾರಕರು ಹೊಸ ಪ್ರೋಮೋ ಅನಾವರಣಗೊಳಿಸಿದ್ದಾರೆ. ಈ ಸೀಸನ್‌ನಲ್ಲಿ ಸ್ವತಃ ಬಿಗ್ ಬಾಸ್ ಆಡುತ್ತಾರೆ ಎಂದು ಹೇಳುವ ಮೂಲಕ ಜನರ ನಿರೀಕ್ಷೆ ಹೆಚ್ಚಿಸಿದ್ದಾರೆ. ಆದರೆ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸುವ ಬಗ್ಗೆ ತಯಾರಕರು ಹೆಚ್ಚು ಜಾಗರೂಕರಾಗಿರುವಂತೆ ತೋರುತ್ತಿದೆ. ಯಾರ ಹೆಸರನ್ನೂ ಕೂಡ ಬಹಿರಂಗಪಡಿಸಿಲ್ಲ.

ಬಿಗ್ ಬಾಸ್ ಸೀಸನ್ 15 ಖ್ಯಾತಿಯ ಶೆಹನಾಜ್ ಗಿಲ್ ಅವರು ಸಲ್ಮಾನ್ ಖಾನ್ ಅವರೊಂದಿಗೆ ಬಿಗ್ ಬಾಸ್ 16ಅನ್ನು ಹೋಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಕ್ಟೋಬರ್ 1 ರಂದು ರಿಯಾಲಿಟಿ ಶೋ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದ್ದರೂ ಅಧಿಕೃತ ಘೋಷಣೆ ಆಗಿಲ್ಲ. ಇನ್ನೂ ಬಿಗ್ ಬಾಸ್ 16 ರ ಪ್ರೀಮಿಯರ್ ಸಂಚಿಕೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆಯಂತೆ. ಅದರ ದ್ವಿತೀಯಾರ್ಧವನ್ನು ಭಾನುವಾರ, ಅಕ್ಟೋಬರ್ 2ರಂದು ಪ್ರಸಾರ ಮಾಡಲಾಗುತ್ತದೆ ಎನ್ನುವ ಮಾಹಿತಿಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!