ಕಾಶ್ಮೀರದಲ್ಲಿ ಬೀಸುತ್ತಿದೆ ಮನರಂಜನೆಯ ಹೊಸ ಗಾಳಿ: 35 ವರ್ಷಗಳ ಬಳಿಕ ಉದಯವಾಯಿತು ಸಿನಿಮಾ ಥಿಯೇಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬರೋಬ್ಬರಿ 35 ರಿಂದ 40 ವರ್ಷಗಳ ಕಾಲ ಮನರಂಜನೆಯಿಂದ ದೂರ ಉಳಿದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಗಾಳಿ ಬೀಸಿದೆ.

ಪ್ರಧಾನಿ ನರೇಂದ್ರ ಮೋದಿ ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದಶವನ್ನಾಗಿ ಘೋಷಿಸಿದ ಬಳಿಕ ತ್ವರಿತಗತಿಯಲ್ಲಿ ಚಿತ್ರಣ ಬದಲಾಯಿತು. ಇದೀಗ ಕಾಶ್ಮೀರದ ಪುಲ್ವಾಮಾ ಹಾಗೂ ಶೋಪಿಯಾನ್‌ನಲ್ಲಿ ಎರಡು ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟನೆ ಗೊಂಡಿದೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ದಿನ ಬಾಗ್ ಮಿಲ್ಕಾ ಬಾಗ್ ಬಾಲಿವುಡ್ ಚಿತ್ರ ಪ್ರದರ್ಶಿಸಲಾಗಿದೆ.

ಪುಲ್ವಾಮಾ ಹಾಗೂ ಶೋಫಿಯಾನ್ ವಲಯದಲ್ಲಿ ಎರಡು ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟನೆ ಮಾಡಲಾಗಿದೆ. ಈ ಕುರಿತು ಮನೋಜ್ ಸಿನ್ಹಾ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಈ ಮಲ್ಲಿಪ್ಲೆಕ್ಸ್ ಥಿಯೇಟರ್‌ನಿದ ಕಣಿವೆ ರಾಜ್ಯದ ಜನತೆಗೆ ಎಲ್ಲರಂತೆ ಸಿನಿಮಾ ವೀಕ್ಷಿಸಲು ಸಾಧ್ಯವಾಗಲಿದೆ. ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರಗಳು ಈ ಮಲ್ಟಿಪ್ಲೇಕ್ಸ್ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಆದರೆ ಈ ಮಲ್ಟಿಪ್ಲೆಕ್ಸ್ ಥಿಯೇಟರ್ ಕೇವಲ ಚಿತ್ರಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಯುವ ಸಮೂಹಕ್ಕೆ ತರಬೇತಿ ನೀಡುವ ಕೇಂದ್ರಗಳು ಆಗಿವೆ ಎಂದು ಮನೋಜ್ ಸಿನ್ಹ ಹೇಳಿದ್ದಾರೆ.
ಸಿನಿಮಾ ಪ್ರೊಡಕ್ಷನ್, ನಿರ್ಮಾಣ, ಕಿರು ಚಿತ್ರ ನಿರ್ಮಾಣ, ನಿರ್ದೇಶನ ಕುರಿತು ತರಬೇತಿಗಳನ್ನು ನೀಡಲಾಗುತ್ತದೆ ಎಂದು ಮನೋಜ್ ಸಿನ್ಹ ಹೇಳಿದ್ದಾರೆ.

1985ರ ವೇಳೆಗೆ ಜಮ್ಮು ಮತ್ತು ಕಾಶ್ಮೀರದ ಬಹುತೇಕ ಎಲ್ಲಾ ಸಿನಿಮಾ ಥಿಯೇಟರ್‌ಗಳು ಮುಚ್ಚಿ ಹೋಗಿತ್ತು. ಇನ್ನು 1999ರಲ್ಲಿ ಲಾಲ್ ಚೌಕ್‌ನಲ್ಲಿ ಸಿನಿಮಾ ಥಿಯೇಟರ್ ಮತ್ತೆ ತೆರೆಯಲಾಯಿತು. ಆದರೆ ಅಷ್ಟೇ ವೇಗದಲ್ಲಿ ಈ ಚಿತ್ರಮಂದಿರ ಮುಚ್ಚಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಜನರು 1990ರ ಬಳಿಕ ಹೊರಗಡೆ ಹೋಗಿ ಸಿನಿಮಾ ಮಂದಿರದಲ್ಲಿ ಚಿತ್ರ ನೋಡಿದ ಊದಾಹರಣೆಗಳಿಲ್ಲ. ಹೋಗುವ ಅವಕಾಶವೂ ಇರಲಿಲ್ಲ.

ಮನರಂಜನೆಯಿಂದ ದೂರ ಉಳಿದಿದ್ದ ಜಮ್ಮು ಕಾಶ್ಮೀರ ಮತ್ತೆ ಸಹಜಸ್ಥಿತಿಗೆ ಮರಳುತ್ತಿದೆ. ಆರ್ಟಿಕಲ್ 370 ರದ್ದು, ಕೇಂದ್ರಾಡಳಿತ ಪ್ರದೇಶ ಘೋಷಣೆ ಬಳಿಕ ಕಣಿವೆ ರಾಜ್ಯ ಒಂದೊಂದು ಸವಲತ್ತು ಪಡೆಯತೊಡಗಿದೆ. ಇದೀಗ ಮಲ್ಟಿಪ್ಲೆಕ್ಸ್ ಉದ್ಘಾಟನೆಗೊಳ್ಳುವ ಮೂಲಕ ಹೊಸ ಇತಿಹಾಸ ರಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!