ಚೀನಾದಲ್ಲಿ ಮಿತಿ ಮೀರಿದ ಕೊರೋನಾ: ಜನರ ರಕ್ಷಿಸಲು ಕ್ರಮ ತೆಗೆದುಕೊಳ್ಳುವಂತೆ ಅಧ್ಯಕ್ಷ ಷಿ ಜಿನ್‌ಪಿಂಗ್ ಒತ್ತಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ದಿನೇ ದಿನೇ ಲಕ್ಷ ಲಕ್ಷ ಜನರು ಕೊರೋನಾ ಸೋಂಕಿಗೆ ಒಳಗಾಗುತ್ತಿದ್ದು, ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಆದ್ರೆ ಇಲ್ಲಿ ತನಕ ಮೌನದಲ್ಲಿಂದ ಅಧ್ಯಕ್ಷ ಷಿ ಜಿನ್‌ಪಿಂಗ್ ಇದೀಗ ಮಾತನಾಡಿದ್ದು, ಜನರ ಬದುಕನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ನಾವು ಆರೋಗ್ಯ ಅಭಿಯಾನವನ್ನು ಹೆಚ್ಚು ಉದ್ದೇಶಿತ ರೀತಿಯಲ್ಲಿ ಪ್ರಾರಂಭಿಸಬೇಕು. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮುದಾಯದ ರಕ್ಷಣಾ ಮಾರ್ಗವನ್ನು ಬಲಪಡಿಸಬೇಕು. ಜನರ ಜೀವನ, ಸುರಕ್ಷತೆ ಮತ್ತು ಆರೋಗ್ಯವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.
ಮುಂದಿನ ಕೆಲವು ತಿಂಗಳುಗಳಲ್ಲಿ ಸುಮಾರು ಒಂದು ಮಿಲಿಯನ್ ಜನರು ಸಾಯಬಹುದು ಎಂದು ಅಧ್ಯಯನಗಳು ಅಂದಾಜಿಸಿದ್ದು, ಜನರು ಸಹಿತ ವೈದ್ಯರು ದೇಶದಲ್ಲಿ ಹೊಸ ಸೋಂಕುಗಳನ್ನು ನಿಭಾಯಿಸಲು ಪರದಾಡುತ್ತಿರುದ್ದು, ಇದೀಗಷಿ ಜಿನ್‌ಪಿಂಗ್ ಮಾತನಾಡಿದ್ದಾರೆ.

ಚೀನಾದ ಆಸ್ಪತ್ರೆಗಳುಐದರಿಂದ ಆರು ಪಟ್ಟು ಹೆಚ್ಚು ರೋಗಿಗಳಿಂದ ತುಂಬಿವೆ ಎಂದು ವರದಿಗಳು ಹೇಳಿವೆ. ಹೆಚ್ಚಾಗಿ ವಯಸ್ಸಾದವರು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ದೇಶದ ಎಲ್ಲಾ ಹಂತದ ಸರ್ಕಾರಗಳು ಔಷಧಿಗಳು ಮತ್ತು ಇತರ ಸರಬರಾಜುಗಳ ಬೇಡಿಕೆಯನ್ನು ಪೂರೈಸುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿವೆ.ಸ್ಮಶಾನಗಳು ತುಂಬಿ ತುಳುಕುತ್ತಿವೆ ಎಂದು ವರದಿಗಳು ಹೇಳಿವೆ.

ಚೀನಾದ ಜನಸಂಖ್ಯೆಯ ಸುಮಾರು 18% ರಷ್ಟಿರುವ ಸುಮಾರು 248 ಮಿಲಿಯನ್ ಜನರು ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯು ಬಹಿರಂಗಪಡಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!