ದಿನಭವಿಷ್ಯ | ಇಂದು ಶುಭದಿನ, ನಿಮಗೆ ಪೂರಕವಾದ ಬೆಳವಣಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಕುಟುಂಬದ ಸುತ್ತಮುತ್ತಲೇ ನಿಮ್ಮ ಇಂದಿನ ದಿನಚರಿ ಸಾಗಲಿದೆ. ಎಲ್ಲರ ಜತೆಗಿನ ಒಡನಾಟ ಉಲ್ಲಾಸ ತುಂಬುವುದು. ಖರ್ಚು ಹೆಚ್ಚು.

ವೃಷಭ
ಉದ್ದೇಶಿಸಿದ ಕಾರ್ಯ ಸಫಲವಾಗುವುದು. ಕುಟುಂಬಸ್ಥರ ಜತೆಗೆ ಹೆಚ್ಚು ಸಮಯ ಕಳೆಯುವ ಅವಕಾಶ. ಆರ್ಥಿಕ ಕೊರತೆ ನಿವಾರಣೆ.

ಮಿಥುನ
ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ. ಅಸೌಖ್ಯ ಕಾಡುವ ಸಾಧ್ಯತೆಯಿದೆ. ತಿನ್ನುವ ಅಭ್ಯಾಸದಲ್ಲಿ ಆರೋಗ್ಯಕರ ಬದಲಾವಣೆ ಮಾಡಿರಿ. ಆರ್ಥಿಕ ಒತ್ತಡ.

ಕಟಕ
ಪ್ರೀತಿಪಾತ್ರರ ಜತೆಗೆ ಮೂಡಿದ್ದ ವೈಮನಸ್ಸು ಶಮನ. ಪರಸ್ಪರ ಹೊಂದಾಣಿಕೆ ಮೂಡಲಿದೆ. ವೃತ್ತಿಯ ಒತ್ತಡವು ನಿವಾರಣೆ ಆಗಲಿದೆ.

ಸಿಂಹ
ಆಸ್ತಿಪಾಸ್ತಿಯ ಖರೀದಿಗೆ ಮನ ಮಾಡಿದ್ದರೆ ಯೋಚಿಸಿ ಮುಂದುವರಿಯಿರಿ. ವಂಚನೆಗೆ ಬಲಿಯಾಗದಂತೆ ನೋಡಿಕೊಳ್ಳಿ.

ಕನ್ಯಾ
ಕೆಲಸದಲ್ಲಿ ಪ್ರಮಾದ ಸಂಭವಿಸಬಹುದು. ಹಾಗಾಗಿ ಎಚ್ಚರದಿಂದ ಕಾರ್ಯ ನಿರ್ವಹಿಸಿ. ಸಂಬಂಧದಲ್ಲಿ ನೈತಿಕ ಗೆರೆ ದಾಟದಿರಿ. ಕೋಪವನ್ನು ನಿಗ್ರಹಿಸಿ.

ತುಲಾ
ಕೆಲಸದಲ್ಲಿ ಹೆಚ್ಚು ಕ್ರೀಯಾಶೀಲರಾಗಿ. ಉದಾಸೀನತೆ ತೊಡೆಯಿರಿ. ನಿಮ್ಮ ಕೆಲಸ ಇತರರು ಮಾಡಬೇಕೆಂದು ಕಾಯಬೇಡಿ.

ವೃಶ್ಚಿಕ
ಹೆಚ್ಚು ಕೆಲಸ, ಹೆಚ್ಚು ಹೊಣೆಗಾರಿಕೆ. ನಿಮ್ಮ ಹಿತಾಸಕ್ತಿ ಕಾಯಲು ಆದ್ಯತೆ ಕೊಡಿ. ಸ್ವಾರ್ಥಿಗಳ ಮಾತಿಗೆ ಮರುಳಾಗಿ ನೀವು ನಷ್ಟ ಮಾಡಿಕೊಳ್ಳದಿರಿ.

ಧನು
ಮನದಲ್ಲಿ ಮೂಡಿದ್ದ ಅಸಮಾಧಾನ ನಿವಾರಣೆ. ಆಪ್ತರ ಸಂಗದಲ್ಲಿ ಹರ್ಷ. ವಿವಾಹಿತರಿಗೆ ಶುಭ ಬೆಳವಣಿಗೆ ಕಂಡುಬಂದೀತು.

ಮಕರ
ಉದ್ದೇಶಿಸಿದ ಕಾರ್ಯವು ನಿರೀಕ್ಷಿಸಿದ ರೀತಿಯಲ್ಲಿ ಪೂರ್ಣವಾಗದೆ ನಿರಾಶೆ. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ಹೊಟ್ಟೆ ಕೆಡುವ ಸಂಭವ ಉಂಟಾದೀತು.

ಕುಂಭ
ಕೌಟುಂಬಿಕ ಬದುಕಿನಲ್ಲಿ ಭಿನ್ನಮತ ತೋರಿ ಬಂದೀತು. ನೀವು ಸಹನೆಯಿಂದ ವರ್ತಿಸುವುದು ಒಳಿತು. ಮಾತಿಗೆ ಮಾತು ಜೋಡಿಸಬೇಡಿ.

ಮೀನ
ಇಂದು ಶುಭದಿನ. ನಿಮಗೆ ಪೂರಕವಾದ ಬೆಳವಣಿಗೆ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಆರ್ಥಿಕ ಒತ್ತಡವು ಕಡಿಮೆಯಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!