ದೇಶದ ಮೊದಲ 5ಜಿ ಟೆಸ್ಟ್‌ಬೆಡ್ ಶುರು: 6ಜಿ ಬಗ್ಗೆ ಪ್ರಧಾನಿ ನೀಡಿದ ಸುಳಿವೇನು??

ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು 6ಜಿ ತಂತ್ರಜ್ನಾನ ಸುಧಾರಣೆಯಲ್ಲಿ ಮಗನವಾಗಿದ್ದು, ಈ ದಶಕದ ಅಂತ್ಯದ ವೇಳೆಗೆ ದೇಶದಲ್ಲಿ 6ಜಿ ಸೇವೆ ಆರಂಭಿಸಲು ದಿಟ್ಟ ಹೆಜ್ಜೆಯಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಮೊದಲ 5ಜಿ ಟೆಸ್ಟ್‌ಬೆಡ್ ಲೋಕಾರ್ಪಣೆಗೊಳಿಸಿದ ಮೋದಿ, ದೇಶದ ಆರ್ಥಿಕತೆಗೆ ಇಂದು 5ಜಿ, 450 ಶತಕೋಟಿ ಡಾಲರ್ ಕೊಡುಗೆ ನೀಡುತ್ತಿದೆ. ಇಂಟರ್ನೆಟ್ ವೇಗದ ಜೊತೆಗೆ ಇದು ಅಭಿವೃದ್ಧಿಯ ವೇಗವನ್ನೂ ಹೆಚ್ಚಿಸುತ್ತದೆ ಎಂದರು. 2ಜಿ ಯುಗ ನೀತಿಯು ಭ್ರಷ್ಟಾಚಾರದ ಸಂಕೇತವಾಗಿತ್ತು, ದೇಶ ಈಗ ಪಾರದರ್ಶಕವಾಗಿ 4ಜಿ ಮತ್ತು ಈಗ 5ಜಿಗೆ ಸಾಗಿದೆ ಎಂದು ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!