ದೇಶೀಯ ಕ್ರಿಕೆಟ್‌ ಟೂರ್ನಿಗಳ ಬಹುಮಾನ ಮೊತ್ತ ಹೆಚ್ಚಿಸಿದ ಬಿಸಿಸಿಐ : ರಣಜಿ ವಿಜೇತರಿಗೆ ಸಿಗಲಿದೆ ₹ 5 ಕೋಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಸಿಸಿಐ ದೇಶೀಯ ಪಂದ್ಯಾವಳಿಗಳಿಗೆ ಬಹುಮಾನದ ಮೊತ್ತ ಹೆಚ್ಚಿಸಿದ್ದು, ಈ ವರ್ಷದ ರಣಜಿ ಟ್ರೋಫಿ ವಿಜೇತರಿಗೆ 5 ಕೋಟಿ ರೂ.ಗಳ ಬೃಹತ್ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ.

ಹೊಸ ಬಹುಮಾನ ಮೊತ್ತದ ಪ್ರಕಾರ, ಪ್ರಸ್ತುತ 2 ಕೋಟಿ ರೂಪಾಯಿ ಚೆಕ್ ಪಡೆದಿರುವ ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ತಂಡಕ್ಕೆ 5 ಕೋಟಿ ರೂ ಸಿಗಲಿದೆ. ರನ್ನರ್ ಅಪ್ ಮತ್ತು ಸೋತ ಸೆಮಿಫೈನಲಿಸ್ಟ್‌ಗಳಿಗೆ ಕ್ರಮವಾಗಿ 3 ಕೋಟಿ ಮತ್ತು 1 ಕೋಟಿ ರೂ ನೀಡಲಾಗುತ್ತದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟ್​ ಮಾಡಿದ್ದು,ಎಲ್ಲಾ ಬಿಸಿಸಿಐ ದೇಶೀಯ ಟೂರ್ನಮೆಂಟ್‌ಗಳಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸಿರುವುದನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಭಾರತೀಯ ಕ್ರಿಕೆಟ್‌ನ ಬೆನ್ನೆಲುಬಾಗಿರುವ ದೇಶೀಯ ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಲು ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ರಣಜಿ ವಿಜೇತರು ₹5 ಕೋಟಿ (2 ಕೋಟಿಯಿಂದ), ಹಿರಿಯ ಮಹಿಳಾ ವಿಜೇತರು ರೂ 50 ಲಕ್ಷ (6 ಲಕ್ಷಗಳಿಂದ) ಎಂದು ಬರೆದುಕೊಂಡಿದ್ದಾರೆ.

ಇರಾನಿ ಕಪ್‌ ನಗದು ಬಹುಮಾನವನ್ನು ದ್ವಿಗುಣಗೊಳಿಸಲಾಗಿದೆ. ವಿಜೇತರಿಗೆ 50 ಲಕ್ಷ ರೂ ನೀಡಲಾಗುತ್ತದೆ. ರನ್ನರ್-ಅಪ್ ತಂಡಕ್ಕೆ ಪ್ರಸ್ತುತ ಯಾವುದೇ ನಗದು ಬಹುಮಾನ ಇರಲಿಲ್ಲ. ಮಂದಿನ ದಿನಗಳಲ್ಲಿ 25 ಲಕ್ಷ ರೂ ಕೊಡಲಾಗುತ್ತದೆ. ದುಲೀಪ್ ಟ್ರೋಫಿಯಲ್ಲಿ ಚಾಂಪಿಯನ್‌ಗಳು 1 ಕೋಟಿ ರೂ. ಮತ್ತು ರನ್ನರ್ ಅಪ್ ತಂಡ 50 ಲಕ್ಷ ರೂ., ವಿಜಯ್ ಹಜಾರೆ ಟ್ರೋಫಿ ವಿಜೇತರು ಈಗ 1 ಕೋಟಿ ರೂ. ಚೆಕ್ ಮತ್ತು ಎರಡನೇ ಸ್ಥಾನ ಪಡೆಯುವ ತಂಡ 50 ಲಕ್ಷ. ದೇವಧರ್ ಟ್ರೋಫಿ ವಿಜೇತರು 40 ಲಕ್ಷ ಮತ್ತು ರನ್ನರ್​ ಅಪ್​ಗೆ 20 ಲಕ್ಷ ರೂ ನಿಗದಿಯಪಡಿಸಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಚಾಂಪಿಯನ್ಸ್ ತಂಡಕ್ಕೆ 80 ಲಕ್ಷ ರೂಪಾಯಿ ಚೆಕ್ ಹಾಗೂ ಸೋತ ತಂಡಕ್ಕೆ 40 ಲಕ್ಷ ರೂ. ಚೆಕ್ ಸಿಗಲಿದೆ.

ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ದೊಡ್ಡ ಉತ್ತೇಜನ ನೀಡುತ್ತಿದ್ದು ಹಿರಿಯ ಮಹಿಳಾ ಏಕದಿನ ಟ್ರೋಫಿ ವಿಜೇತರಿಗೆ 50 ಲಕ್ಷ ರೂಪಾಯಿ ಚೆಕ್ ಮತ್ತು ರನ್ನರ್ ಅಪ್ ತಂಡವು 25 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಹಿರಿಯ ಮಹಿಳಾ ಟಿ20 ಟ್ರೋಫಿಯ ಬಹುಮಾನದ ಮೊತ್ತವನ್ನೂ ಸಹ ಹೆಚ್ಚಿಸಲಾಗಿದ್ದು, ವಿಜೇತರಿಗೆ 40 ಲಕ್ಷ ರೂ ಹಾಗೂ ಸೋತ ತಂಡಕ್ಕೆ 20 ಲಕ್ಷ ರೂ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!