ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆ ಮೂಲಕ ಮಹಿಳಾ ಕುಲವನ್ನು ಅಪಮಾನಿಸಿದ್ದಾರೆ: ಪ್ರಹ್ಲಾದ್ ಜೋಶಿ‌ ಕಿಡಿ

ಹೊಸದಿಗಂತ ವರದಿ, ಹುಬ್ಬಳ್ಳಿ:
ದೇಶದಲ್ಲಿ ಭ್ರಷ್ಟಾಚಾರ ಹಾಗೂ ಮಹಿಳಾ ಚಾರಿತ್ಯಾವಧೆಗಳು ಆರಂಭವಾಗಿದ್ದೇ ಕಾಂಗ್ರೆಸ್ ನಿಂದ‌ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮೇಲಿನಿಂದ ತಳದವರೆಗೂ ಭ್ರಷ್ಟಾಚಾರದ ಕೂಪ. ಹೇಳುವರು ಕೇಳುವವರು ಯಾರು ಇರಲಿಲ್ಲ. ರಾಜೀವ ಗಾಂಧಿ ಫೌಂಡೇಶನ್‌ಗೆ ಚೀನಾದಿಂದ ದುಡ್ಡುಹೊಡೆಯುವುದರಿಂದ ಹಿಡಿದು ಕಲ್ಲಿದ್ದಲು ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರದ ನಿದರ್ಶನಗಳಿವೆ ಎಂದರು.
ಇವರು ಮಾಡಿದ ಭ್ರಷ್ಟಾಚಾರದಿಂದ ಕೆಲ ಅಧಿಕಾರಿಗಳು ಇಂದಿಗೂ ಜೈಲು ವಾಸ ಅನುಭವಿಸುತ್ತಿದ್ದಾರೆ. ʼಭ್ರಷ್ಟಾಚಾರʼ ʼಮಂಚ ಹತ್ತುವುದುʼ ಎಂಬ ಪದಗಳನ್ನು ಬಳಸುವ ಮೂಲಕ ಪ್ರಿಯಾಂಕ್ ಖರ್ಗೆ ಕಿಳು ಅಭಿರುಚಿ ಪ್ರದರ್ಶಿಸಿದ್ದಾರೆ. ಈ ಹೇಳಿಕೆ ಮಹಿಳಾ ಕುಲಕ್ಕೆ ಅವಮಾನ ಮಾಡಿದೆ. ಭಾರತೀಯ ಮಹಿಳೆ ತನ್ನ ಚಾರಿತ್ರ್ಯ, ತನ್ನ ಸಂಸ್ಕೃತಿಗಳನ್ನು ಬಿಟ್ಟುಕೊಡುವುದಿಲ್ಲ. ಅವರ ಹೇಳಿಕೆಯನ್ನು ಯಾರು ಒಪ್ಪಲು ಅಸಾಧ್ಯ. ಮಹಿಳಾ ಸಮಾಜಕ್ಕೆ ಕ್ಷಮೆಯಾಚಿಸಬೇಕು ಎಂದು ತಿಳಿಸಿದರು.
ಅವರು ಭ್ರಷ್ಟಾಚಾರ ಅಭಿವೃದ್ಧಿ ಬಗ್ಗೆ ಮಾತನಾಡುವ ಮುನ್ನ ಬಿಜೆಪಿ‌ ಸರ್ಕಾರದ ಬರುವ ಮೊದಲು ಕಲ್ಯಾಣ ಕರ್ನಾಟಕ ಪರಿಸ್ಥಿತಿ ಏನು ಇತ್ತು ಎಂಬುದು ಅರ್ಥಮಾಡಿಕೊಳ್ಳಬೇಕು. ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಎಂಥಹ ಭ್ರಷ್ಟಾಚಾರ ಮಾಡಿದ್ದಾರೆ ಎಂದು ನೆನಪಿಸಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
ಭಾರತದ ಹಿಂದೆಂದಿಗಿಂತಲೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರಾಬಲ್ಯ ಸಾಧಿಸುತ್ತಿದೆ. ವಿಶ್ವ ಶಾಂತಿಗೆ ಭಾರತ ಮಧ್ಯಸ್ಥಿಕೆ ವಹಿಸುವಂತಹ ಸಂದರ್ಭದಲ್ಲಿ ಒದಗಿಬಂದಿರುವುದು ನಮ್ಮೇಲ್ಲರ ಹೆಮ್ಮೆ ಎಂದು ಹೇಳಿದರು. ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಜಾಗತಿಕ ಮಟ್ಟದಲ್ಲಿ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದೆ.‌ ಕರೋನಾ ನಂತರದಲ್ಲಿ ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವ ದೇಶವಾಗಿದೆ. ಸುರಕ್ಷತೆಗೆ ಅಷ್ಟೇ ಗಮನಹರಿಸಲಾಗುತ್ತಿದೆ ಹಾಗಾಗೀ ಈ ಎಲ್ಲ ಕಾರಣಗಳಿಂದ ಭಾರತದ ಗೌರವ ಹೆಚ್ಚಾಗಿದೆ ಎಂದರು.
ಪ್ರತಿಯೊಬ್ಬರು ಮನೆಯ ಮೇಲೆ ಧ್ವಜ ಹಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಬೇಕು. ಈ ದೇಶ ನನ್ನದು ಎನ್ನುವ ಭಾವನೆ ಮೂಡಬೇಕು ಅಂದಾಗ ಮಾತ್ರ ಸ್ವಾರ್ಥ ದೂರವಾಗಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!