ಫಲಿಸಲಿಲ್ಲ ಪ್ರಾರ್ಥನೆ: ನಟಿ ಖುಷ್ಬೂ ಸಹೋದರ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಅವರ ಸಹೋದರ ಅಬ್ದುಲ್ಲಾ ಖಾನ್ ನಿಧನರಾಗಿದ್ದಾರೆ. ಇದರಿಂದಾಗಿ ಖುಷ್ಬೂ ಕುಟುಂಬ ಶೋಕದಲ್ಲಿ ಮುಳುಗಿದೆ.

ಈ ಕುರಿತು ಮಾಹಿತಿ ನೀಡಿದ ಖುಷ್ಬೂ, ಅಣ್ಣನ ಯಾತ್ರೆ ಇಂದಿಗೆ ಮುಗಿಯಿತು. ಆದ್ರೆ ಅವರ ಪ್ರೀತಿ ಮತ್ತು ಮಾರ್ಗದರ್ಶನ ಸದಾ ನನ್ನೊಂದಿಗಿರುತ್ತದೆ. ತನ್ನ ಸಹೋದರನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದು ದುಃಖವನ್ನ ವ್ಯಕ್ತಪಡಿಸಿದ್ದಾರೆ.

 

ಅಣ್ಣ ಹೇಳಿದ ಹಾಗೆ ಬದುಕಿನ ಪಯಣವನ್ನ ದೇವರು ನಿರ್ಧರಿಸುತ್ತಾನೆ. ನಾನು ಅವನೊಂದಿಗೆ ಶಾಶ್ವತವಾಗಿ ಸಂತೋಷವಾಗಿರಲು ಬಯಸುತ್ತೇನೆ’ ಎಂದು ಖುಷ್ಬೂ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!