ಬ್ರಿಟನ್ ಪ್ರಧಾನಿ ಲಿಜ್ ಟ್ರಸ್‌ಗೆ ಅಧಿಕಾರ ನೀಡುವ ಸಭೆಯಲ್ಲಿ ಭಾಗಿಯಾಗಿದ್ದರು ರಾಣಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ರಾಣಿ ಎಲಿಜಬೆತ್ II ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆಯೇ ಕುಟುಂಬದ ಆಪ್ತರು ಅರಮನೆಗೆ ಆಗಮಿಸಿದ್ದರು.
ರಾಜಮನೆತನದಿಂದ ದೂರು ಉಳಿದಿರುವ ಮೊಮ್ಮಗ ಹ್ಯಾರಿ, ಪತ್ನಿ ಮೇಘನ್ ಮರ್ಕೆಲ್ ಕೂಡಾ ಕೆನಡಾದಿಂದ ಲಂಡನ್‌ಗೆ ಆಗಮಿಸಿದ್ದರು. ಈ ನಡುವೆ ಬುಧವಾರ ತನ್ನ ಹಿರಿಯ ರಾಜಕೀಯ ಸಲಹೆಗಾರರೊಂದಿಗೆ ನಿಗದಿಯಾಗಿದ್ದ ಸಭೆಯಿಂದ ರಾಣಿ ಅವಧಿಗೂ ಮುನ್ನವೇ ಹೊರಬಂದಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದ್ದರು. ಅಚ್ಚರಿಯೆಂದರೆ ಅದಕ್ಕೂ ಹಿಂದಿನವಷ್ಟೇ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಲಿಜ್ ಟ್ರಸ್‌ಗೆ ಅಧಿಕಾರ ನೀಡುವ ಸಭೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!