ಬ್ಲ್ಯಾಕ್‌ಬಾಕ್ಸ್ ಬಿಚ್ಚಿಟ್ಟಿದೆ ಚೀನಾ ವಿಮಾನ ದುರಂತದ ‘ಬೆಚ್ಚಿಬೀಳಿಸುವ’ ಸತ್ಯ!!?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡು ತಿಂಗಳ ಹಿಂದೆ ಜಗತ್ತಿನ ಗಮನಸೆಳೆದಿದ್ದ ಚೀನಾ ಈಸ್ಟರ್ನ್ ಏರ್ಲೈನ್ಸ್ ನ ಜೆಟ್ ವಿಮಾನ ದುರಂತ ‘ಸ್ಫೋಟಕ’ ತಿರುವು ಕಂಡಿದೆ.
ವಿಮಾನದ ಬ್ಲ್ಯಾಕ್ ಬಾಕ್ಸ್ ವರದಿ ಹೊರಬಿದ್ದಿದ್ದು, ಇದು ಆಕಸ್ಮಿಕ ಅಪಘಾತವಲ್ಲ, ಉದ್ದೇಶಪೂರ್ವಕ ನಡೆಸಿದ ಕೃತ್ಯ ಎಂಬುದು ಸ್ಪಷ್ಟವಾಗಿದೆ.
ಈ ಬಗ್ಗೆ ವಿವಿಧ ಮಾಧ್ಯಮಗಳು ವರದಿ ಮಾಡಿದ್ದು, ಕಾಕ್‌ಪಿಟ್‌ನಲ್ಲಿದ್ದ ಯಾರೋ ಉದ್ದೇಶಪೂರ್ವಕವಾಗಿ ವಿಮಾನ ಅಪಘಾತಕ್ಕೀಡಾಗುವಂತೆ ಮಾಡಿದ್ದಾರೆ ಎಂದು ಬ್ಲಾಕ್ ಬಾಕ್ಸ್ ಡೇಟಾ ಸೂಚಿಸುತ್ತದೆ ಎಂದು ಹೇಳಿವೆ. ಪ್ರಾಥಮಿಕ ತನಿಖೆಯ ಸಂದರ್ಭ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಇದ್ದ ಸೂಚನೆ ಸಿಕ್ಕಿರಲಿಲ್ಲ. ಕಾಕ್‌ಪಿಟ್‌ನಲ್ಲಿದ್ದ ಸಿಬ್ಬಂದಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಈ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
123 ಪ್ರಯಾಣಿಕರು, ಒಂಬತ್ತು ಸಿಬ್ಬಂದಿಗಳನ್ನು ಹೊತ್ತಿದ್ದ ಈ ವಿಮಾನ ನೈಋತ್ಯ ಚೀನಾದ ಕುನ್ಮಿಂಗ್ ನಗರದಿಂದ ಆಗ್ನೇಯದಲ್ಲಿ ಹಾಂಗ್ ಕಾಂಗ್ ಬಳಿಯ ಪ್ರಾಂತೀಯ ರಾಜಧಾನಿ ಗುವಾಂಗ್‌ಝೌಗೆ ತೆರಳುವ ಹಾದಿ ಮಧ್ಯೆ ದುರಂತ ಅಂತ್ಯ ಕಂಡಿತ್ತು. ಬಳಿಕ ಸುಮಾರು ೫ ಅಡಿ ಆಳದಲ್ಲಿ ಹೂತುಹೋಗಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್‌ಗಳನ್ನು ಮೇಲಕ್ಕೆತ್ತಿ ವಾಷಿಂಗ್ಟನ್‌ನ ಸರ್ಕಾರಿ ಪ್ರಯೋಗಾಲಯದಲ್ಲಿ ತನಿಖೆಗೊಳಪಡಿಸಲಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!