ಮಸೀದಿಯಲ್ಲಿ ವಿದ್ಯುತ್ ಕಡಿತ ನೆಪದಲ್ಲಿ ಗುಂಡಿನ ದಾಳಿ: 2 ಸಾವು, 11 ಮಂದಿಗೆ ಗುಂಡೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದ ಪೇಶಾವರದ ವಾಯುವ್ಯ ಬುಡಕಟ್ಟು ಜಿಲ್ಲೆಯ ಮಸೀದಿಯೊಂದರಲ್ಲಿ ವಿದ್ಯುತ್‌ ಕಡಿತ ವಿಚಾರವಾಗಿ ಆರಾಧಕರ ನಡುವೆ ವಾದ- ವಿವಾದ ಸಂಭವಿದೆ. ಈ ವೇಳೆ ನಡೆಸಲಾದ ಮಾರಣಾಂತಿಕ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ, 11 ಮಂದಿ ಗಾಯಗೊಂಡಿದ್ದಾರೆ.
ಆರ್ಥಿಕ ಹಿಂಜರಿತದಿಂದ ಕುಸಿದು ಹೋಗಿರುವ ಪಾಕ್‌ ನಲ್ಲಿ ನಿರಂತರ ವಿದ್ಯುತ್ ಲೋಡ್‌ ಶೆಡ್ಡಿಂಗ್‌‌ ಜಾರಿಯಲ್ಲಿದೆ. ಲಕ್ಕಿ ಮಾರ್ವತ್ ಜಿಲ್ಲೆಯ ಐಸಾಕ್ ಖೇಲ್ ಪ್ರದೇಶದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆಯೇ ವಿದ್ಯತ್‌ ಸ್ಥಗಿತಗೊಂಡಿದೆ. ಇದರಿಂದ ಆಕ್ರೋಶಗೊಂಡ ಗುಂಪೊಂದು ತಮ್ಮ ಪ್ರದೇಶದಲ್ಲಿ ನಿರಂತರ ವಿದ್ಯುತ್ ಕಡಿತದ ಬಗ್ಗೆ ಮಸೀದಿಯಲ್ಲಿ ಗಲಾಟೆ ನಡೆಸಿದೆ.
ಆ ಬಳಿಕ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಕೆಲವು ಆರಾಧಕರು ಗುಂಡಿನ ಚಕಮಕಿ ನಡೆಸಿ ಈ ವೇಳೆ ಇಬ್ಬರನ್ನು ಕೊಂದಿದ್ದಾರೆ. ಈ ವೇಳೆ ಆರು ವರ್ಷದ ಮಗು ಸೇರಿದಂತೆ 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!