ವಿಶ್ವವಿಖ್ಯಾತ ಹಂಪಿಗೂ ಕಾಡಿದ ವರುಣ: ಪ್ರವಾಸಿಗರ ಕಣ್ಣೆದುರೇ ಕುಸಿಯುತ್ತಿವೆ ಮಂಟಪ, ತಡೆಗೋಡೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ವಿಶ್ವವಿಖ್ಯಾತ ಹಂಪಿಯಲ್ಲಿ ಅಪಾರ ಹಾನಿ ಉಂಟುಮಾಡುತ್ತಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಿಂದ ಕಮಲಾಪುರ ರಸ್ತೆಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ನೆಲಸ್ತರದ ಶಿವ ದೇವಾಲಯದಲ್ಲಿ ಮಳೆಯ ಹೊಡೆತಕ್ಕೆ ಮಂಟಪವೊಂದು ಕುಸಿದಿದೆ. ಜೊತೆಗೆ ಪ್ರಸನ್ನ ವಿರೂಪಾಕ್ಷ ದೇಗುಲದ ಮೂರು ಕಲ್ಲಿನ ಕಂಬಗಳು ನೆಲಕ್ಕುರುಳಿದ್ದು, ಮಣ್ಣಿನ ತಡೆಗೋಡೆ ಕೂಡಾ ನೆಲಕ್ಕಚ್ಚಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಇಲ್ಲಿನ ಶಿವ ದೇವಾಲಯವು ಕೂಡಾ ಸಂಪೂರ್ಣ ಜಲಾವೃತವಾಗಿದೆ. ಈ ಬೆಳವಣಿಗೆಗಳು ಪ್ರವಾಸಿಗರಲ್ಲಿ ತೀವ್ರ ನಿರಾಶೆ ಉಂಟುಮಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!