ಶಿಕ್ಷೆ ಕಡಿಮೆಗೊಳಿಸಿ ಎಂದು ‘ಸುಪ್ರೀಂ’ ಮೊರೆಹೋದ ಮುಂಬೈ ಬ್ಲಾಸ್ಟ್ ರೂವಾರಿಗೆ ಚಾಟಿ ಬೀಸಿದ ಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಬು ಸಲೇಮ್‌ಗೆ ಮತ್ತೆ ಹಿನ್ನಡೆಯಾಗಿದೆ.

ತನ್ನ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದ ಅಬ್ ಸಲೇಮ್‌ಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. 1993ರ ಮುಂಬೈ ಬ್ಲಾಸ್ಟ್ ಪ್ರಕರಣ ರೂವಾರಿ ಅಬು ಸಲೇಮ್‌ಗೆ ನೀಡಿರುವ ಶಿಕ್ಷೆ ಘಟನೆಯಲ್ಲಿ ಮಡಿದ ಕುಟಂಬಕ್ಕೆ ನೀಡಿದ ನ್ಯಾಯವಾಗಿದೆ. ಈ ಶಿಕ್ಷೆಯನ್ನು ಕಡಿತಗೊಳಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

ಶಿಕ್ಷೆಯಿಂದ ಪಾರಾಗಲು 20 ವರ್ಷಗಳ ಹಿಂದೆ ನೀಡಿದ್ದ ಮಾತನ್ನು ಕೋರ್ಟ್ ಮುಂದೆ ವಾದಿಸಿದ ಅಬು ಸಲೇಮ್‌ಗೆ ಕೋರ್ಟ್ ತಕ್ಕ ಉತ್ತರ ನೀಡಿದೆ. 1993ರ ಮುಂಬೈ ಸ್ಫೋಟ ಪ್ರಕರಣ ಬಳಿಕ ಪರಾರಿಯಾಗಿದ್ದ ಅಬ್ ಸಲೇಮ್‌ನನ್ನು ತನಿಖಾ ಸಂಸ್ಥೆ 2022 ಪೋರ್ಚುಗಲ್‌ನಲ್ಲಿ ಪತ್ತೆ ಹಚ್ಚಿತ್ತು. ಬಳಿಕ ಕಾನೂನು ಹೋರಾಟ ಮುಂದುವರಿಸಿದ ಭಾರತ, 2005ರಲ್ಲಿ ಪೋರ್ಚುಗಲ್‌ನಿಂದ ಭಾರತಕ್ಕೆ ಗಡೀಪಾರು ಮಾಡುವಲ್ಲಿ ಯಶಸ್ವಿಯಾಗಿತ್ತು.

ಈ ವೇಳೆ ಪೂರ್ಚುಗಲ್ ನಿಯಮದ ಪ್ರಕಾರ ಭಾರತ ಶಿಕ್ಷೆ ಪ್ರಮಾಣವನ್ನು ಹೇಳಬೇಕಿತ್ತು. ಈ ವೇಳೆ ಗರಿಷ್ಠ 25 ವರ್ಷ ಜೈಲು ಶಿಕ್ಷೆ ಎಂದಿತ್ತು. ಈ ಮಾತನ್ನು ಮುಂದಿಟ್ಟ ಅಬು ಸಲೇಮ್ ಈಗಾಗಲೇ 17 ವರ್ಷ ಜೈಲಿನಲ್ಲಿ ಕಳೆದಿದ್ದೇನೆ. ಜೀವಾವಧಿ ಶಿಕ್ಷೆ ಪ್ರಮಾಣವನ್ನು 25 ವರ್ಷಕ್ಕೆ ಕಡಿತಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾನೆ.

2017ರಲ್ಲಿ ಸುಪ್ರೀಂ ಕೋರ್ಟ್ ಅಬು ಸಲೇಮ್ ದೋಷಿ ಎಂದು ತೀರ್ಪು ನೀಡಿತ್ತು. ಈ ವೇಳೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಈ ಶಿಕ್ಷೆ ಪ್ರಮಾಣ ಕಡಿತಗೊಳಿಸಲು ಮನವಿ ಮಾಡಿದ್ದ ಅಬು ಸಲೇಮ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಶಿಕ್ಷೆಯಲ್ಲಿ ಉನ್ನತ ಶಿಕ್ಷೆ ಅಥವಾ ಕಡಿಮೆ ಶಿಕ್ಷೆ ಎಂದಿಲ್ಲ. ಕಾನೂನು ಉಲ್ಲಂಘನೆ, ಗಂಭೀರತೆಯನ್ನ ನೋಡಿಕೊಂಡು ಶಿಕ್ಷೆ ವಿಧಿಸಲಾಗುತ್ತದೆ. ಕೋರ್ಟ್ ವಿಧಿಸಿದ ಶಿಕ್ಷೆಯನ್ನು ಪೂರೈಸಿದರೆ ಮಡಿದ ಕುಟುಂಬಸ್ಥರಿಗೆ ನ್ಯಾಯ ಸಿಗಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪೂರ್ಚುಗಲ್ ಅಥವಾ ಇನ್ಯಾವುದೇ ದೇಶದ ಕಾನೂನು ಬಳಸಿ ಶಿಕ್ಷೆ ಪ್ರಮಾಣದ ತಪ್ಪಿಸಲು ಸಾಧ್ಯವಿಲ್ಲ. ಈ ನೆಲದ ಕಾನೂನು ಗೌರವಿಸಬೇಕು ಎಂದು ಕೋರ್ಟ್ ಹೇಳಿದೆ.

1993ರ ಮುಂಬೈ ಸ್ಫೋಟದಲ್ಲಿ 257 ಮಂದಿ ಮೃತಪಟ್ಟಿದ್ದರು. 713 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರತದ ಮೇಲೆ ನಡೆದ ಬಾಂಬ್ ಸ್ಫೋಟ ಪ್ರಕಣರ ಹಾಗೂ ದಾಳಿಗಳಲ್ಲಿ 1993ರ ಮುಂಬೈ ಸ್ಫೋಟ ಗರಿಷ್ಠ ಮಟ್ಟದ ಸಾವು ನೋವು ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!