ಶೀನಾ ಬೋರಾ ಹತ್ಯೆ ಪ್ರಕರಣ: ಆರು ವರ್ಷಗಳ ಬಳಿಕ ಇಂದ್ರಾಣಿಗೆ ಜಾಮೀನು ಭಾಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರೀ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುಪಾಲಾಗಿರುವ ಮಾಧ್ಯಮ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ನೀಡಿದೆ.
ಕಳೆದ ಆರು ವರ್ಷಗಳಿಂದ ಇಂದ್ರಾಣಿ ಮುಖರ್ಜಿ ಕಂಬಿಎಣಿಸುತ್ತಿದ್ದಾರೆ. ಈ ಪ್ರಕರಣ ಸಾಂದರ್ಭಿಕ ಸಾಕ್ಷ್ಯಗಳ ಆಧಾರಿತವಾಗಿದೆ. ಶೀಘ್ರದಲ್ಲಿ ವಿಚಾರಣೆ ಮುಗಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಖರ್ಜಿಗೆ ನ್ಯಾಯಾಲಯ ಬಿಡುಗಡೆ ಭಾಗ್ಯ ಕರುಣಿಸಿದೆ. ಈ ಹಿಂದೆ ಪೀಟರ್ ಮುಖರ್ಜಿ ಅವರಿಗೆ ವಿಧಿಸಲಾಗಿದ್ದ ಷರತ್ತುಗಳೇ ಇಂದ್ರಾಣಿ ಮುಖರ್ಜಿಗೂ ಅನ್ವಯಿಸುತ್ತದೆ ಎಂದು ಕೋರ್ಟ್ ಹೇಳಿದೆ.
2012ರ ಏ.24ರಂದು ಶೀನಾ ಬೋರಾಳನ್ನು ಹತ್ಯೆಗೈದ ಆರೋಪ ಹೊತ್ತಿರುವ ಇಂದ್ರಾಣಿ ಮುಖರ್ಜಿಯನ್ನು ಆಗಸ್ಟ್ 25, 2015 ರಂದು ಖರ್ ಪೊಲೀಸರು ಬಂಧಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!