Saturday, July 2, 2022

Latest Posts

1ನೇ ಇನ್ನಿಂಗ್ಸ್ ನಲ್ಲಿ ಆಲ್ ಔಟ್ ಆದ ಕೋಹ್ಲಿ ಪಡೆ; ಮೇಲುಗೈ ಸಾಧಿಸಿದ ಕಿವೀಸ್

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ 165 ರನ್ ಗಳಿಗೆ ಆಲ್ ಔಟ್ ಆದ ಭಾರತ.

ವೆಲ್ಲಿಂಗ್ಟನ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ 43 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಅಜಿಂಕ್ಯ ರಹಾನೆ 46 ಮತ್ತು ಮಯಂಕ್ ಅಗರ್ವಾಲ್ 34 ರನ್ ಶಮಿ 21 ರನ್ ಗಳಿಸಿದರು. ಉಳಿದ ಬ್ಯಾಟ್ಸ್ ಮೆನ್ ಗಳಾರು ತಂಡಕ್ಕೆ ಉತ್ತಮ ಮೊತ್ತ ನೀಡಲಿಲ್ಲ. ಕೊನೆಯಲ್ಲಿ ಸರ್ವಪತನ ಕಂಡು 165 ರನ್ ಗಳಿಸಿದರು.

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ 89 ರನ್ ಗಳಿಸಿ ತಂಡಕ್ಕೆ ನೆರವಾದರೆ, ಬಿ.ಜೆ ವಾಟ್ಲಿಂಗ್ 14 ರನ್ ಮತ್ತು ಕೊಲಿನ್ ಡೆ ಗ್ರಾಂಡ್ ಹೋಮ್ 4 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ 71.01 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 216 ಗಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss