ಬಳ್ಳಾರಿ: ನಗರದ 7ನೇ ವಾರ್ಡ್ ಬಾಪೂಜಿ ನಗರದಲ್ಲಿ 1 ಕೋಟಿ ರೂ.ವೆಚ್ಚದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭವನದ ಭೂಮಿ ಪೂಜೆಗೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭಾನುವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈ ಭಾಗದ ಜನರ ಕಳೆದ ಸುಮಾರು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಸುಸಜ್ಜಿತವಾಗಿ ಕಟ್ಟಡ ನಿರ್ಮಾಣವಾಗಬೇಕು. ಯಾವುದೇ ಕಾರಣಕ್ಕೂ ಕಳಪೆ ಯಾಗಬಾರದು, ಕಂಡು ಬಂದಲ್ಲಿ ಅಥವಾ ದೂರುಗಳು ಬಂದಲ್ಲಿ ಖಂಡಿತ ಕ್ರಮಕೈಗೊಳ್ಳುವೆ. ಅಭಿವೃದ್ದಿ ವಿಚಾರದಲ್ಲಿ ಯಾರ ಮುಲಾಜಿಯೂ ಇಲ್ಲ, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಎಚ್ಚರಿಸಿದರು. ಈ ಕಾರ್ಯಕ್ರಮದಲ್ಲಿ ನಗರದ 7ನೇ ವಾರ್ಡ್ ನ ಪ್ರಮುಖರಾದ ಮಾನಯ್ಯ, ರಾಮಕೃಷ್ಣ, ನಾಗೇಂದ್ರ, ಉಮಾದೇವಿ, ಶಿವರಾಜ್, ಓಂಕಾರೇಶ್ವರ, ಆಂಜನೇಯ, ಎಲ್ಲಪ್ಪ, ಹೊನ್ನೂರಪ್ಪ, ಜ್ಯೋತಿ,,
ಸುಮತಿಆನಂದ್, ತುಕಾರಾಂ, ಶ್ರೀರಾಮ್ ,ಆದಿನಾರಾಯಣ, ವೆಂಕಟೇಶ್, ದೇವದಾಸ, ಹಾಗೂ ಬಳ್ಳಾರಿ ರಾಯಚೂರು ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕರಾದ G ವೀರಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌತ್ಕರ್ ಶ್ರೀನಿವಾಸರೆಡ್ಡಿ, ಎಪಿಎಂಸಿ ಸದಸ್ಯರಾದ ಜಿಸಿ ಕೃಷ್ಣಾರೆಡ್ಡಿ, ಹಾಗೂ ವಾರ್ಡಿನ ಪ್ರಮುಖ ಮುಖಂಡರು ಭಾಗವಹಿಸಿದ್ದರು.