Thursday, August 11, 2022

Latest Posts

2020ರ ಲಾಕ್‌ಡೌನ್ ನಡುವೆಯೂ ಭಾರತದಲ್ಲಿ ರಸ್ತೆ ಅಪಘಾತಕ್ಕೆ 1.20 ಲಕ್ಷ ಮಂದಿ ಬಲಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

2020ರಲ್ಲಿ ನಿರ್ಲಕ್ಷ್ಯದಿಂದ ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ 1.20 ಲಕ್ಷ ಮಂದಿ ಮೃತಪಟ್ಟಿದ್ದಾರೆ.
2020 ರಲ್ಲಿ ಕೊರೋನಾ ಸೋಂಕಿನ ಹಾವಳಿ ಹೆಚ್ಚಿದ್ದು, ಲಾಕ್‌ಡೌನ್‌ಗಳಿದ್ದವು. ಆದರೂ ಸರಾಸರಿ 328 ಜನರು ಪ್ರತಿದಿನ ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತನ್ನ ವಾರ್ಷಿಕ ಕ್ರೈಮ್ ಇಂಡಿಯಾದಲ್ಲಿ ವರದಿ ಬಹಿರಂಗಪಡಿಸಿದೆ.
ಒಟ್ಟಾರೆ ಮೂರು ವರ್ಷದಲ್ಲಿ ಅಪಘಾತಗಳಲ್ಲಿ 3.92 ಲಕ್ಷ ಮಂದಿ ಪ್ರಾಣಕಳೆದುಕೊಂಡಿದ್ದಾರೆ. 2019 ರಲ್ಲಿ 1.36 ಲಕ್ಷ ಮತ್ತು 2018 ರಲ್ಲಿ 1.35 ಲಕ್ಷ ಮಂದಿ ಮೃತಪಟ್ಟಿದ್ದಾರೆ.
2020ರಲ್ಲಿ 41.196 ಹಿಟ್ ಆಂಡ್ ರನ್ ಪ್ರಕರಣಗಳು ದಾಖಲಾಗಿವೆ. ಪ್ರತಿದಿನಕ್ಕೆ 112 ಹಿಟ್ ಆಂಡ್ ರನ್ ಪ್ರಕರಣಗಳಿ ವರದಿಯಾಗಿವೆ.
ಸಾರ್ವಜನಿಕರ ನಿರ್ಲಕ್ಷ್ಯ ಅಥವಾ ವಾಹನ ಚಲಾಯಿಸುವವರ ನಿರ್ಲಕ್ಷ್ಯದಿಂದ ದಾರಿಯಲ್ಲಿ ಚಲಿಸುವ 1.30 ಲಕ್ಷ ಮಂದಿಗೆ ತೊಂದರೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss