ಮತ್ತೆ ಪ್ರವಾಸಿಗರ ಸ್ವರ್ಗವಾಗುತ್ತಿದೆ ಕಾಶ್ಮೀರ: 2022ರಲ್ಲಿ ಕಳೆದ 75 ವರ್ಷಗಳಲ್ಲೇ ಅತಿಹೆಚ್ಚು ಪ್ರವಾಸಿಗರ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈ ಹಿಂದೆ ಭಯೋತ್ಪಾದಕ ಚಟುವಟಿಕೆಗಳ ನಾಡಾಗಿದ್ದ ಕಾಶ್ಮೀರ ಇದೀಗ ಪ್ರವಾಸಿಗರ ನಾಡಾಗುತ್ತಿದೆ. ಕೇಂದ್ರ ಸರ್ಕಾರದ ಭಯೋತ್ಪಾದನಾ ನಿಗ್ರಹ ಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಭಯಮುಕ್ತಗೊಂಡಿರುವ ಕಾಶ್ಮೀರ ಪ್ರವಾಸಿಗರನ್ನು ಕೈಬೀಸಿ ಸೆಳೆಯುತ್ತಿದೆ. ಕಣಿವೆ ರಾಜ್ಯಕ್ಕೆ ಈ ವರ್ಷ ಇಲ್ಲಿಯವರೆಗೆ ದಾಖಲೆಯ 1.62 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ, ಇದು ಸ್ವಾಇದು ಸ್ವಾತಂತ್ರ್ಯದ 75 ವರ್ಷಗಳಲ್ಲೇ ಅತ್ಯಧಿಕವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಕೇಂದ್ರಾಡಳಿತ ಪ್ರದೇಶದ ಇತ್ತೀಚಿನ ಒಟ್ಟಾರೆ ಅಭಿವೃದ್ಧಿ ಮತ್ತು ಬದಲಾವಣೆಗಳಿಗೆ ಸಾಕ್ಷಿಯಾಗಿದೆ.
ʼಮೂರು ದಶಕಗಳ ನಂತರ, ಕಾಶ್ಮೀರವು ಲಕ್ಷಗಟ್ಟಲೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ, ಇದು ಕಾಶ್ಮೀರ ಪ್ರವಾಸೋದ್ಯಮದ ಸುವರ್ಣ ಯುಗಕ್ಕೆ ಮರಳಿದೆʼ ಎಂದು ಅಧಿಕಾರಿಯೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರವಾಸೋದ್ಯಮವು ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಯೋಗದ ದೊಡ್ಡ ಮೂಲವಾಗಿದೆ. ಈ ವರ್ಷದ ಮೊದಲ ಎಂಟು ತಿಂಗಳಲ್ಲಿ 3.65 ಲಕ್ಷ ಅಮರನಾಥ ಯಾತ್ರಿಗಳು ಸೇರಿದಂತೆ ದಾಖಲೆಯ 20.5 ಲಕ್ಷ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ದೇಶದಾದ್ಯಂತ ಪ್ರವಾಸಿಗರನ್ನು ವೈಭವದ ಮತ್ತು ಸುಂದರವಾದ ಕಣಿವೆ ರಾಜ್ಯದತ್ತ ಸೆಳೆದಿದೆ ಎಂದು ಅವರು ಹೇಳಿದರು. ಪ್ರವಾಸಿ ತಾಣಗಳಾದ ಪಹಲ್ಗಾಮ್, ಗುಲ್ಮಾರ್ಗ್ ಮತ್ತು ಸೋನಾಮಾರ್ಗ್ ಮತ್ತು ಶ್ರೀನಗರದ ಎಲ್ಲಾ ಹೋಟೆಲ್‌ಗಳು ಮತ್ತು ಅತಿಥಿಗೃಹಗಳು 100 ಪ್ರತಿಶತದಷ್ಟು ತುಂಬಿಹೋಗುತ್ತಿವೆ ಎಂದು ಅವರು ಹೇಳಿದರು.
ಪೂಂಚ್, ರಜೌರಿ, ಜಮ್ಮು ಮತ್ತು ಕಾಶ್ಮೀರ ಕಣಿವೆ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಪ್ರವಾಸೋದ್ಯಮವು ಗರಿಷ್ಠ ಉದ್ಯೋಗವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ದಶಕಗಳ ನಂತರ ಚಲನಚಿತ್ರ ಕ್ಷೇತ್ರವನ್ನು ಆಕರ್ಷಿಸಲು ಚಿತ್ರೀಕರಣಕ್ಕೆ ಅನವು ಕಲ್ಪಿಸುವ  ಸಮಗ್ರ ಚಲನಚಿತ್ರ ನೀತಿಯನ್ನು ಪ್ರಾರಂಭಿಸಲಾಗಿದೆ ಮತ್ತು ಈ ನೀತಿಯ ಅಧಿಸೂಚನೆಯ ಒಂದು ವರ್ಷದೊಳಗೆ 140 ಚಲನಚಿತ್ರಗಳು ಮತ್ತು ವೆಬ್-ಸರಣಿಗಳಿಗೆ ಶೂಟಿಂಗ್ ಅನುಮತಿ ನೀಡಲಾಗಿದೆ ಎಂದು ಅಧಿಕಾರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!