ತಿರುಚ್ಚಿ ಮಾರುಕಟ್ಟೆಯಲ್ಲಿ ಹೀಲಿಯಂ ಟ್ಯಾಂಕ್ ಸ್ಫೋಟ: ಓರ್ವ ಸಾವು, 6ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡಿನ ತಿರುಚ್ಚಿಯ ಜನನಿಬಿಡ ಮಾರುಕಟ್ಟೆಯೊಂದರಲ್ಲಿ ಹೀಲಿಯಂ ಟ್ಯಾಂಕ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದೃಶ್ಯ ದಾಖಲಾಗಿದೆ.

ಸ್ಫೋಟ ಸಂಭವಿಸಿದ ಕೊಟ್ಟೈ ವಾಸಲ್ ಪ್ರದೇಶವು ಜನಸಂದಣಿ ಮಾರುಕಟ್ಟೆ ಸ್ಥಳವಾಗಿದ್ದು ಮತ್ತು ವಾರಾಂತ್ಯದ ದಿನವಾದ ಕಾರಣ ಈ ಪ್ರದೇಶ ಜನರಿಂದ ತುಂಬಿ ತುಳುಕಿತ್ತು. ಏಕಾಏಕಿ ಸಂಭವಿಸಿದ ಸ್ಫೋಟವು ಜನರನ್ನು ಬೆಚ್ಚಿಬೀಳಿಸಿದೆ, ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 13 ವರ್ಷದ ಬಾಲಕ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಗಾಜು ಕೂಡ ಪುಡಿಪುಡಿಯಾಗಿದೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ವ್ಯಕ್ತಿಯನ್ನು ಮಟ್ಟು ರವಿ ಎಂದು ಗುರುತಿಸಿದ್ದು, ಸ್ಫೋಟದ ನಿಖರ ಕಾರಣ ಹುಡುಕಲು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಹೀಲಿಯಂ ಬಲೂನ್‌ ಮಾರಾಟ ಮಾಡುತ್ತಿದ್ದ ಬಲೂನ್ ಮಾರಾಟಗಾರರಿಗಾಗಿ ಪೊಲೀಸರು ಇದೀಗ ಹುಡುಕಾಟ ನಡೆಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!