Friday, July 1, 2022

Latest Posts

ನಟ ವಿಜಯ್​ಗೆ ವಿಧಿಸಿದ್ದ 1 ಲಕ್ಷ ರೂ. ದಂಡಕ್ಕೆ ಮದ್ರಾಸ್​ ಹೈಕೋರ್ಟ್​ ತಡೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿದೇಶದಿಂದ ಐಷಾರಾಮಿ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರು ಆಮದು ಮಾಡಿಕೊಂಡು ತೆರಿಗೆ ಕಟ್ಟುವುದರಲ್ಲಿ ವಿನಾಯಿತಿ ಕೇಳಿದ್ದ ನಟ ವಿಜಯ್​ಗೆ ನ್ಯಾಯಾಲಯ ಛೀಮಾರಿ ಹಾಕಿತ್ತು. ಅದನ್ನು ಪ್ರಶ್ನಿಸಿ ವಿಜಯ್​ ಅರ್ಜಿ ಸಲ್ಲಿಸಿದ್ದರು. ಈಗ ಮದ್ರಾಸ್​ ಹೈಕೋರ್ಟ್ ​ ದ್ವಿ-ಸದಸ್ಯ ಪೀಠವು ವಿಜಯ್​ ಪರವಾಗಿ ತೀರ್ಪು ನೀಡಿದ್ದು, ಒಂದು ಲಕ್ಷ ರೂ. ದಂಡಕ್ಕೆ ತಡೆ ನೀಡಿದೆ.
ಈ ಹಿಂದಿನ ತೀರ್ಪಿನಲ್ಲಿ ವಿಜಯ್​ ಒಂದು ಲಕ್ಷ ರೂ. ದಂಡ ಕಟ್ಟಬೇಕು ಎಂದು ಆದೇಶಿಸಲಾಗಿತ್ತು. ಅಲ್ಲದೆ, ಸಿನಿಮಾ ನಟರ ಬಗ್ಗೆ ಕಟು ಟೀಕೆ ಮಾಡಲಾಗಿತ್ತು.
ತೆರೆಗೆ ಕಟ್ಟಲು ವಿಜಯ್​ ಹಿಂದೇಟು ಹಾಕಿದ್ದಾರೆ. ತೆರಿಗೆ ನಿಯಮಗಳನ್ನು ಅವರು ಗಾಳಿಗೆ ತೂರಿದ್ದಾರೆ. ಇದು ದೇಶವಿರೋಧಿ ಮನಸ್ಥಿತಿ ಎಂದು ಹಿಂದಿನ ತೀರ್ಪಿನಲ್ಲಿ ವಿಜಯ್​ಗೆ ಛೀಮಾರಿ ಹಾಕಲಾಗಿತ್ತು. ಇಂಥ ಕಟು ಟೀಕೆಯನ್ನು ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿದ್ದನ್ನು ಪ್ರಶ್ನಿಸಿ ವಿಜಯ್​ ಮತ್ತೆ ಅರ್ಜಿ ಸಲ್ಲಿಸಿದ್ದರು. ತೆರೆಗೆ ಕಟ್ಟುವುದಿಲ್ಲ ಎಂದು ವಿಜಯ್​ ಹೇಳುತ್ತಿಲ್ಲ. ಆದರೆ ನಟರ ಸಮುದಾಯದ ಬಗ್ಗೆ ಕಟು ಟೀಕೆ ಮಾಡಿರುವುದನ್ನು ಅವರು ಪ್ರಶ್ನಿಸುತ್ತಿದ್ದಾರೆ ಎಂದು ವಿಜಯ್​ ಪರ ವಕೀಲರು ವಾದ ಮಂಡಿಸಿದ್ದಾರೆ. ಒಂದು ವಾರದೊಳಗೆ ನಟ ವಿಜಯ್​ ಅವರ ಐಷಾರಾಮಿ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರಿಗೆ ಬಾಕಿ ಉಳಿಸಿಕೊಂಡಿರುವ ಶೇ.80ರಷ್ಟು ಎಂಟ್ರಿ ಟ್ಯಾಕ್ಸ್​ ಕಟ್ಟಬೇಕು ಎಂದು ಈಗ ಮದ್ರಾಸ್​ ಹೈಕೋರ್ಟ್​ ಆದೇಶಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss